ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯದೆಲ್ಲೆಡೆ ಆಯುಧ ಪೂಜೆಗೆ ಸಿದ್ಧತೆ
ದಸರೆಯ ಸಂದರ್ಭದಲ್ಲಿ ಆಯುಧ ಪೂಜೆಗೂ ಪ್ರಮುಖ ಆದ್ಯತೆ. ವನವಾಸದ ನಂತರ ಪಾಂಡವರು ಬನ್ನಿ ಮರದಲ್ಲಿ ಬಚ್ಚಿಟ್ಟ ಆಯುಧಗಳನ್ನು ಪೂಜಿಸಿದ ನೆನಪಿನ ಫಲವಾಗಿ ನಡೆದುಕೊಂಡು ಬಂದಿರುವ ಆಯುಧ ಪೂಜೆಗೆ ರಾಜ್ಯದೆಲ್ಲೆಡೆ ಭರದ ತಯಾರಿ ನಡೆಯುತ್ತಿದೆ.

ಆಸ್ತಿಕ ಮಂದಿ ವಾಹನ, ತಮ್ಮ ದಿನನಿತ್ಯ ಕೆಲಸಕ್ಕೆ ನೆರವಾಗುವ ಸಲಕರಣೆಗಳಿಗೆ ವಿಶೇಷ ಪೂಜೆಯನ್ನು ಮಾಡುವುದು ಸಾಮಾನ್ಯ. ಆಯುಧ ಪೂಜೆಗೂ ಕುಂಬಳಕಾಯಿಗೂ ಅವಿನಾಭಾವ ಸಂಬಂಧ. ಆಯುಧ ಪೂಜೆಯಲ್ಲಿ ಕುಂಬಳ ಕಾಯಿಗೆ ವಿಶೇಷ ಸ್ಥಾನ. ಅದಕ್ಕಾಗಿ ನಗರದ ವಿವಿಧೆಡೆಯಲ್ಲಿ ಕುಂಬಳಕಾಯಿ ಮಾರಾಟ ಭರದಿಂದ ನಡೆಯುತ್ತಿದೆ.

ರೈತರು ತಾವು ಬೆಳೆದ ಕುಂಬಳಕಾಯಿಗೆ ಸಾಕಷ್ಟು ಧಾರಣೆಯನ್ನು ನಗರ ಪ್ರದೇಶದಲ್ಲಿ ಪಡೆಯುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ವ್ಯಾಪಾರ ನಡೆಯುತ್ತಿದೆ. ಎಂಬುದು ಹಾಸನದ ರೈತ ಸೂರಪ್ಪನ ಅಭಿಪ್ರಾಯ.ಕುಂಬಳಕಾಯಿ ಕೆಟ್ಟ ದೃಷ್ಟಿಯನ್ನು ದೂರಮಾಡುವ ಸಂಕೇತವನ್ನು ಹೊಂದಿದ್ದು ಈ ಕಾರಣದಿಂದ ಉದ್ಯಾನ ನಗರಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಇದರ ಮಾರಾಟ ಹೆಚ್ಚಿದೆ.
ಮತ್ತಷ್ಟು
ಸರ್ಕಾರ ರಚಿಸಲು ಮಠಾಧಿಪತಿಗಳ ಸಾಥ್ !
ರಾಜಕೀಯ ಕಸರತ್ತು: ಪಕ್ಷಗಳ ನಿಗೂಢ ನಿಲುವು
ದಸರಾ ಅಂತ್ಯದೊಳಗೆ ಹೊಸ ಸರಕಾರ?
ಜೆಡಿಎಸ್ ರೆಸಾರ್ಟ್ ಸಭೆ ವಿಫಲ
ರಾಜಕೀಯ ಮೀಸಲಾತಿ: ಬ್ರಾಹ್ಮಣ ಸಂಘ ಭಾರೀ ಪ್ರತಿಭಟನೆ
ಪಕ್ಷಗಳ ವೈಮನಸ್ಸು: ಚುನಾವಣೆ ಅನಿವಾರ್ಯ