ತನ್ನ ವಿರುದ್ಧ ಧರ್ಮಯುದ್ಧ ಸಾರಿರುವ ಬಿಜೆಪಿ ವಿರುದ್ಧ ವಿಶಾಲ ಪಾದಯಾತ್ರೆಯನ್ನು ನವೆಂಬರ್ 1ರಿಂದ ಹಮ್ಮಿಕೊಳ್ಳಲು ಜೆಡಿಎಸ್ ನಿರ್ಧರಿಸಿದ್ದು. ನವೆಂಬರ್ 1ರಿಂದ ಬಸವಕಲ್ಯಾಣದಿಂದ ಆರಂಭಗೊಳ್ಳಲಿರುವ ಈ ಯಾತ್ರೆ ಕಾರವಾರದಲ್ಲಿ ಮುಕ್ತಾಯವಾಗಲಿದೆ.
ಈ ಯಾತ್ರೆಯಲ್ಲಿ ಕಳೆದ 20 ತಿಂಗಳುಗಳ ಆಡಳಿತಾವಧಿಯಲ್ಲಿ ಜೆಡಿಎಸ್ ಸಾಧನೆಗಳನ್ನು ಪ್ರಚಾರ ಪಡಿಸಲಾಗುವುದು ಎಂದು ಜೆಡಿಎಸ್ ಅಧ್ಯಕ್ಷ ಮಿರಾಜುದ್ದೀನ್ ಪಟೇಲ್ ತಿಳಿಸಿದ್ದಾರೆ.
ಬಿಜೆಪಿ ಜೆಡಿಎಸ್ ವಿರುದ್ಧ ವ್ಯಾಪಕ ಅಪಪ್ರಚಾರವನ್ನು ರಾಜ್ಯಾದ್ಯಂತ ಆರಂಭಿಸಿದ್ದು ಇದರ ವಿರುದ್ಧವಾಗಿ ಈ ವಿಶಾಲ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಯಾತ್ರೆಯ ಉದ್ದಕ್ಕೂ ಮಾಜಿ ಪ್ರದಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಂ.ಪಿ.ಪ್ರಕಾಶ್, ಸೇರಿದಂತೆ ಪಕ್ಷದ ಹಿರಿಯರು ಭಾಗವಹಿಸಲಿದ್ದಾರೆ. ಈ ಯಾತ್ರೆಯನ್ನು ಪ್ರಕಟಿಸುವ ಮೂಲಕ ಬಿಜೆಪಿ ವಿರುದ್ಧ ಜೆಡಿಎಸ್ ಕೂಡಾ ಬಹಿರಂಗ ಸಮರ ಸಾರಿದೆ
|