ನವರಾತ್ರಿ ಉತ್ಸವದ ಅಂಗವಾಗಿ ರಾಜ್ಯದ ವಿವಿಧೆಡೆಗಳಲ್ಲಿ ಇಂದು ಆಯುಧ ಪೂಜೆ ಕಾರ್ಯಕ್ರಮಗಳು ನಡೆಯುತ್ತಿವೆ. ಮೈಸೂರಿನಲ್ಲಿ ವಿಶೇಷವಾಗಿ ನಾಳೆ ನಡೆಯಲಿರುವ ಜಂಭೂ ಸವಾರಿಯೊಂದಿಗೆ ಈ ಬಾರಿಯ ದಸರಾ ಹಬ್ಬಕ್ಕೆ ತೆರೆ ಬೀಳಲಿದೆ.
ನವರಾತ್ರಿಯ ಅಂಗವಾಗಿ ರಾಜ್ಯದ ವಿವಿಧೆಡೆಗಳಲ್ಲಿ ಕಳೆದ 8 ದಿನಗಳಿಂದ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಮೈಸೂರಿನಲ್ಲಿ ಇಂದು ಮುಂಜಾನೆ ವೈಭವದ ಆಯುಧ ಪೂಜೆ ನಡೆಯಿತು. ಅರಮನೆಯ ಆಯುಧಗಳಿಗೆ ರಾಜ ಶ್ರೀಕಂಠ ದತ್ತ ಒಡೆಯರ್ ಅವರು ನೆರೆವೇರಿಸಿದರು.
ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ಜಟ್ಟಿ ಕಾಳಗಕ್ಕೂ ಇಂದು ಚಾಲನೆ ದೂರಕಿದೆ, ಚಾಮುಂಡಿಯ ಬೆಳ್ಳಿ ಪಲ್ಲಕ್ಕಿಯ ಮೆರವಣಿಗೆಯೂ ಸಹ ಇಂದು ನಡೆಯಲಿದೆ. ನಾಡಹಬ್ಬ ದಸರಾ ಮಹೋತ್ಸವನ್ನು ನೋಡಲು ನಗರಕ್ಕೆ ಲಕ್ಷಾಂತರ ಮಂದಿ ದೇಶ - ವಿದೇಶಗಳಿಮದ ಆಗಮಿಸಿದ್ದಾರೆ. ಅಲ್ಲಿನ ದಿನ ನಿತ್ಯ ನಡೆಯುವ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಳಿಸುತ್ತಿವೆ.ಇಂದು ಹೇಮಾ ಮಾಲಿನಿಯ ನೃತ್ಯ ಪ್ರದರ್ಶನ ಮೈಸೂರಿನ ಮಹಾರಾಜ ಕಾಲೇಜು ಕ್ರೀಡಾಂಗಣಲ್ಲಿ ನಡೆಯಲಿದೆ.
|