ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ ಅವಕಾಶ ನೀಡುವ ಸಂಬಂಧ ರಾಜ್ಯಪಾಲ ರಾಮೇಶ್ವರ ಠಾಕೂರ್ ಇದೇ 28 ರಂದು ನಿರ್ಧರಿಸಲಿದ್ದಾರೆ. ದತ್ತಮಾಲೆ ಅಭಿಯಾನದ ರೂವಾರಿ ಶಾಸಕ ಸಿಟಿ ರವಿ ಮನವಿ ರಾಜ್ಯಪಾಲರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಈ ನಡುವೆ ಚಿಕ್ಕಮಗಳೂರಿನಲ್ಲಿ ದತ್ತ ಮಾಲೆ ಅಭಿಯಾನ ಇಂದು ಆರಂಭಗೊಂಡಿತು. ಖಾವಿಧಾರಿ ದತ್ತ ಅಭಿಯಾನದ ಸಾವಿರಾರು ಮಂದಿ ಯುವಕರು ದತ್ತನ ದರ್ಶನ ಪಡೆದರು.
ಶೋಭಾಯಾತ್ರೆ ನಡೆಸುವ ಸಂಬಂಧ ಯಾವುದೇ ರಾಜಕೀಯಕ್ಕೆ ಅವಕಾಶ ನೀಡಲಾರೆ ಎಂದು ಪ್ರತಿಕ್ರಿಯಿಸಿರುವ ರಾಜ್ಯಪಾಲ ಠಾಕೂರ್, ಕಾನೂನು ವಿರೋಧಿ ಕೃತ್ಯವನ್ನು ನಡೆಸುವ ಯಾವುದೇ ಸಂಘಟನೆಗೂ ಅವಕಾಶ ನೀಡಲಾರೆ ಎಂದಿದ್ದಾರೆ.
|