ಮಳೆಯ ಅಬ್ಬರದ ನಡುವೆಯೂ ಮೈಸೂರು ನಗರ ನಾಳೆ ನಡೆಯುವ ಜಂಬೂ ಸವಾರಿಗೆ ಸಜ್ಜಾಗಿದೆ.
ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸುತ್ತಿರುವ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಮೈಸೂರು ಸಂಪ್ರದಾಯ ರೀತ್ಯಾ ಪೂರ್ಣಕುಂಭ ಸ್ವಾಗತಕ್ಕೆ ಸಕಲ ಸಿದ್ದತೆಗಳು ನಡೆದಿದೆ. ಅರಮನೆಯ ಆವರಣದಲ್ಲಿ ನಾಳೆಮಧ್ಯಾಹ್ನ 1.50ಕ್ಕೆ ಅರಮನೆಯ ಬಲರಾಮದ್ವಾರದ ಎದುರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮುಖೇನ ಜಂಬೂಸವಾರಿಗೆ ಮಧ್ಯಾಹ್ನ 2 ಗಂಟೆಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ.
ಅದಕ್ಕೆ ಪೂರ್ವಭಾವಿಯಾಗಿ ಮಧ್ಯಾಹ್ನ ಹಳೆಯ ಕಾರುಗಳ ಮೇಳವಾದ ವಿಂಟೇಜ್ ಕಾರ್ ರಾಲಿ ಮಧ್ಯಾಹ್ನ 12 ಕ್ಕೆ ಅರಮನೆಯಿಂದ ಬನ್ನಿಮಂಟಪದವರೆಗೆ ನಡೆಯಲಿದೆ. ರಾಜ್ಯಪಾಲರಿಗೆ ವಂದನೆ ಸೂಚಿಸುವ ಸಲುವಾಗಿ ಸಂಜೆ 6.30ಕ್ಕೆ ಬನ್ನಿಮಂಟಪ ಮೈದಾನದಲ್ಲಿ ಸಂಜೆ 6.30ಕ್ಕೆ ಟಾರ್ಚ್ ಲೈಟ್ ಪೆರೇಡ್ ನಡೆಯಲಿದ್ದು ವಿಧಾನ ಸಭಾಧ್ಯಕ್ಷ ಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಬಿಗಿ ಬಂದೋಬಸ್ತ್: ಗುಪ್ತಚರ ಇಲಾಖೆಗಳ ಮಾಹಿತಿಯ ಪ್ರಕಾರ ಈ ಬಾರಿಯ ದಸರಾ ಉತ್ಸವಕ್ಕೆ ಉಗ್ರರ ದಾಳಿಯ ಭೀತಿಯ ಶಂಕೆಯಿಂದ ವ್ಯಾಪಕ ಬಂದೋಬಸ್ತನ್ನು ಮಾಡಲಾಗಿದೆ. ವಿಶ್ವವಿಖ್ಯಾತ ಜಂಬೂ ಸವಾರಿಯ ಮೆರವಣಿಗೆಯಲ್ಲಿ ಭಾಗವಹಿಸಲು ಈಗಾಗಲೂ ದೇಶ, ವಿದೇಶಗಳಿಂದ ಜನ ಸಾಗರವೇ ಮೈಸೂರಿಗೆ ಹರಿದು ಬರುತ್ತಿದೆ. ನಗರದ ಸುತ್ತಮುತ್ತಲಿನ ಎಲ್ಲಾ ಹೋಟೆಲ್,ರೆಸಾರ್ಟ್‌ಗಳು ಪ್ರವಾಸಿಗರಿಂದ ತುಂಬಿ ಹೋಗಿದೆ. ಹಳೆಯ ಮೈಸೂರು ಪ್ರಾಂತ್ಯದ ಮನೆಗಳು ಬಾಗಿಲನ್ನು ತೆರೆದುಕೊಂಡು ಮೈಸೂರ ಯಾತ್ರಿಕರನ್ನು ಕೈಬೀಸಿ ಕರೆಯವ ಅತಿಥಿ ದಾಮಗಳ ಸಂಖ್ಯೆ ನಾಯಿ ಕೊಡೆಯಂತೆ ದಿನೇ ದಿನೇ ಹೆಚ್ಚಾಗುತ್ತಿದೆ.
|