ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬೆಂಗಳೂರು:ಬಾಲಾಪರಾಧಿಗಳು ಪರಾರಿ
ಬೆಂಗಳೂರು ನಗರದ ಮಡಿವಾಳ ರಿಮಾಂಡ್ ಹೋಂನಿಂದ ಬಾಲಾಪರಾಧಿಗಳು ಪರಾರಿಯಾಗಿದ್ದಾರೆ.

ಇಂದು ಮುಂಜಾನೆ ರಿಮಾಂಡ್ ಹೋಂಗೆ ಕನ್ನ ಕೊರೆದು ಬಾಲಾಪರಾಧಿಗಳು ಪರಾರಿಯಾಗಿದ್ದಾರೆ. ಈ ಹಿಂದೆ ಇದೇ ರೀತಿಯ ಘಟನೆ ನಡೆದಿದ್ದು, 40 ಮಂದಿ ಬಾಲಾಪರಾಧಿಗಳು ಪರಾರಿಯಾಗಿದ್ದರು. ರಿಮಾಂಡ್ ಹೋಂ ಶಿಥಿಲಾವಸ್ಥೆ ಮತ್ತು ಬಾಲಾಪರಾಧಿಗಳು ಎಂಬ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ತಪ್ಪಿಸಿಕೊಂಡಿರುವ ಬಾಲಾಪರಾಧಿಗಳು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿ ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಪ್ಪಿಸಿಕೊಂಡಿರುವ ಅಪರಾಧಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.
ಮತ್ತಷ್ಟು
ಜಂಬೂ ಸವಾರಿ:ವಾಹನ ಸಂಚಾರ ಮಾರ್ಗ ಬದಲಾವಣೆ
ರಾಜ್ಯಪಾಲರಿಂದ ಜಂಬೂ ಸವಾರಿ ಉದ್ಘಾಟನೆ
28 ರಂದು ದತ್ತಪೀಠ ಶೋಭಾಯಾತ್ರೆ
ರಾಜ್ಯಾದ್ಯಂತ ವೈಭವದ ಆಯುಧ ಪೂಜೆ
ಜನಪದ ಕಲಾವಿದರ ಸಂಭಾವನೆ ಹೆಚ್ಚಳ
ತಲಕಾವೇರಿಯಲ್ಲಿ ತೀರ್ಥೋದ್ಭವ