ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಇಂದು ವಿಶ್ವ ವಿಖ್ಯಾತ ಜಂಬೂಸವಾರಿ
ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂರಿ ಸವಾರಿ ಇಂದು ನಡೆಯಲಿದ್ದು, ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಇಂದು ಮಧ್ಯಾಹ್ನ ಇದಕ್ಕೆ ಚಾಲನೆ ನೀಡಲಿದ್ದಾರೆ.

ಅಪರಾಹ್ನ 1.50ಕ್ಕೆ ಅರಮನೆಯ ಬಲರಾಮದ್ವಾರದ ಎದುರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮುಖೇನ ಜಂಬೂಸವಾರಿಗೆ ವಿಧ್ಯುಕ್ತ ಚಾಲನೆ ದೊರೆಯಲಿದ್ದು, ರಾಜ್ಯದ ಸಂಸ್ಕೃತಿ ಸಾರುವ ವಿವಿಧ ಟ್ಯಾಬ್ಲೋಗಳು ಈ ವೈಭವದ ಮೆರವಣಿಗೆಗೆ ಸಜ್ಜಾಗಿವೆ.

ಜಂಬೂಸವಾರಿಗೆ ಮುನ್ನ ಹಳೆಯ ಕಾರುಗಳ ಮೇಳವಾದ ವಿಂಟೇಜ್ ಕಾರ್ ರಾಲಿಯು ಅರಮನೆಯಿಂದ ಬನ್ನಿಮಂಟಪದವರೆಗೆ ನಡೆಯುತ್ತಿದೆ.

ರಾಜ್ಯಪಾಲರಿಗೆ ವಂದನೆ ಸೂಚಿಸುವ ಸಲುವಾಗಿ ಸಂಜೆ 6.30ಕ್ಕೆ ಬನ್ನಿಮಂಟಪ ಮೈದಾನದಲ್ಲಿ ಸಂಜೆ 6.30ಕ್ಕೆ ಟಾರ್ಚ್ ಲೈಟ್ ಪೆರೇಡ್ ನಡೆಯಲಿದ್ದು ವಿಧಾನ ಸಭಾಧ್ಯಕ್ಷ ಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಗುಪ್ತಚರ ಇಲಾಖೆಗಳ ಮಾಹಿತಿಯ ಪ್ರಕಾರ ಈ ಬಾರಿಯ ದಸರಾ ಉತ್ಸವಕ್ಕೆ ಉಗ್ರರ ದಾಳಿಯ ಭೀತಿಯ ಶಂಕೆಯಿಂದ ವ್ಯಾಪಕ ಬಂದೋಬಸ್ತನ್ನು ಮಾಡಲಾಗಿದೆ.
ಮತ್ತಷ್ಟು
ಬೆಂಗಳೂರು:ಬಾಲಾಪರಾಧಿಗಳು ಪರಾರಿ
ಜಂಬೂ ಸವಾರಿ:ವಾಹನ ಸಂಚಾರ ಮಾರ್ಗ ಬದಲಾವಣೆ
ರಾಜ್ಯಪಾಲರಿಂದ ಜಂಬೂ ಸವಾರಿ ಉದ್ಘಾಟನೆ
28 ರಂದು ದತ್ತಪೀಠ ಶೋಭಾಯಾತ್ರೆ
ರಾಜ್ಯಾದ್ಯಂತ ವೈಭವದ ಆಯುಧ ಪೂಜೆ
ಜನಪದ ಕಲಾವಿದರ ಸಂಭಾವನೆ ಹೆಚ್ಚಳ