ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಜೆಡಿ(ಎಸ್) ಸರಕಾರ ರಚಿಸಲಿದೆಯೇ ಅಥವಾ ಮಧ್ಯಂತರ ಚುನಾವಣೆಗೆ ಸಿದ್ಧತೆ ನಡೆಸಲಿದೆಯೇ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಜೆಡಿ(ಎಸ್) ಹಿರಿಯ ನಾಯಕರು ಸೋಮವಾರ ಮಹತ್ವದ ಸಭೆಯನ್ನು ನಡೆಸಲಿದ್ದಾರೆ.
ಜೆಡಿ(ಎಸ್) ಅಧ್ಯಕ್ಷ ದೇವೇಗೌಡ ಅವರ ಅನಾರೋಗ್ಯದ ಕಾರಣದಿಂದಾಗಿ ಈ ಸಭೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಲಾಗಿತ್ತು.
ಈ ಮೊದಲು ಚುನಾವಣೆಯನ್ನು ತಪ್ಪಿಸಿ ಹೊಸ ಸರಕಾರವನ್ನು ರಚಿಸುವಂತೆ ಪಕ್ಷದ ಎಮ್‌ಎಲ್ಎಗಳು ಒತ್ತಡದ ಹೇರಿದ್ದರಿಂದ ಚರ್ಚೆ ನಡೆಸಲು ಗೌಡ ಅವರನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹಿರಿಯ ನಾಯಕ ಎಂ.ಪಿ ಪ್ರಕಾಶ್ ಆಮಂತ್ರಿಸಿದ್ದರು.
ಅಕ್ಟೋಬರ್ 15ರಂದು ನಡೆದಿದ್ದ ಎರಡು ದಿನಗಳ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೆಚ್ಚಿನ ಶಾಸಕರು ಪಕ್ಷವು ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದ ಕುರಿತು ಆರೋಪಿಸಿದ್ದಲ್ಲದೆ ಚುನಾವಣೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು.
ಬಿಜೆಪಿಯ "ವಿಶ್ವಾಸ ದ್ರೋಹಿಗಳಿಗೆ ಶಿಕ್ಷೆ ನೀಡಿ ಕರ್ನಾಟಕವನ್ನು ರಕ್ಷಿಸಿ" ಪ್ರತಿಭಟನೆಯನ್ನು ವಿರೋಧಿಸುವ ಸಲುವಾಗಿ ಜೆಡಿ(ಎಸ್) ಪಕ್ಷವು 'ವಿಶಾಲಯಾತ್ರಾ' ಆಂದೋಲನವನ್ನು ನವೆಂಬರ್ ಒಂದರಿಂದ ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ಪ್ರಾರಂಭಿಸಲಿದ್ದು, ಇದರಲ್ಲಿ ದೇವೇಗೌಡ, ಕುಮಾರಸ್ವಾಮಿ ಮತ್ತು ಇತರ ನಾಯಕರು ಭಾಗವಹಿಸಲಿದ್ದಾರೆ.
|