ರಾಜ್ಯಾದ್ಯಂತ ಸಂಭ್ರಮದ ಶಾರದಾ ಪೂಜಾ ಮಹೋತ್ಸವ ಹಾಗೂ ವಿಜಯ ದಶಮಿ ಪೂಜೆ ಅದ್ದೂರಿಯಿಂದ ನಡೆಯಿತು. ಮೈಸೂರಿನಲ್ಲಿ ವೈಭವದ ಜಂಬೂ ಸವಾರಿ ಭಾನುವಾರ ನಡೆದಿದ್ದು, ರಾಜ್ಯದ ವಿವಿಧೆಡೆ ಶಾರದಾ ಪೂಜೆ ಮತ್ತು ಶಾರದಾ ವಿಗ್ರಹ ವಿಸರ್ಜನೆ ಮೆರವಣಿಗೆಗಳು ಗಮನ ಸೆಳೆದವು.
ಶಾರದಾ ಪೂಜೆ ಪ್ರಯುಕ್ತ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಶಾರದಾ ದೇವಿ ವಿಗ್ರಹ ಮತ್ತು ಇತರ ನವದುರ್ಗೆಯರ ವಿಗ್ರಹದ ವಿಸರ್ಜನಾ ಮೆರವಣಿಗೆಯು ಭಾನುವಾರ ರಾತ್ರಿ ನಡೆದಿದ್ದು, ವಿವಿಧ ಟ್ಯಾಬ್ಲೋ, ಸುಡುಮದ್ದು ಇತ್ಯಾದಿಗಳೊಂದಿಗೆ ಗಮನ ಸೆಳೆಯಿತು.
ಮಂಗಳೂರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಈ ವಿಸರ್ಜನಾ ಮೆರವಣಿಗೆಯು ರಸ್ತೆಗಳ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತಾದಿಗಳ ಕಣ್ಮನ ತಣಿಸಿತು.
|