ಪುಸ್ತಕ ಪ್ರಿಯರಿಗೆ 10 ದಿನಗಳ ಕಾಲ ರಸದೌತಣ ಒದಗಿಸಿದ್ದ ಪುಸ್ತಕೋತ್ಸವ -2007 ಮುಕ್ತಾಯ ಕಂಡಿತು. ಈ ಬಾರಿ ವರುಣನ ಆರ್ಭಟ ಹೆಚ್ಚಿದ್ದರೂ ಪುಸ್ತಕ ಪ್ರೇಮಿಗಳ ಉತ್ಸಾಹಕ್ಕೆ ಅದು ಭಂಗವನ್ನೇನು ತರಲಿಲ್ಲ.
ಸುಮಾರು 1.5 ರಿಂದ 1.8 ಲಕ್ಷ ಜನ ಪುಸ್ತಕೋತ್ಸವದಲ್ಲಿ ಭಾಗವಹಿಸಿದ್ದರು, 18 ರಿಂದ 19 ಕೋಟಿ ರೂಪಾಯಿಗಳಷ್ಟು ಪುಸ್ತಕ ವಹಿವಾಟು ನಡೆದಿದೆ ಎಂದು ಪುಸ್ತಕೋತ್ಸವ ಆಯೋಜಿಸಿರುವ ಬೆಂಗಳೂರು ಪುತ್ಸಕ ಮಾರಾಟಗಾರರು ಹಾಗು ಪ್ರಕಾಶಕರ ಸಂಘದ ಕಾರ್ಯದರ್ಶಿ ದೇವರು ಭಟ್ ತಿಳಿಸಿದ್ದಾರೆ.
ತೇಜಸ್ವಿ ಮುಂದೆ:
ನಲವತ್ತಾರು ಕನ್ನಡ ಪುಸ್ತಕಗಳ ಮಳಿಗೆಗಳಿದ್ದ ಈ ಬಾರಿ ಪುಸ್ತಕೋತ್ಸವದಲ್ಲಿ ದಿವಂಗತ ಪೂರ್ಣಚಂದ್ರ ತೇಜಸ್ವಿ ಕೃತಿಗಳು ಸಾಹಿತ್ಯ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟ ವಾದವು.
ತೇಜಸ್ವಿ ಯವರ ಕೃತಿಗಳು ಎಸ್.ಎಲ್ ಬೈರಪ್ಪನವರ ಕೃತಿಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ್ದು ವಿಶೇಷ. ಉಳಿದಂತೆ ಅನಂತಮೂರ್ತಿ, ಕುವೆಂಪು, ಕಾರಂತ ಲಂಕೇಶರ ಕೃತಿಗಳು ಸಾಹಿತ್ಯ ಸಾಕ್ತರನ್ನು ಸೆಳೆದವು. ಅಲ್ಲದೆ ಅಡುಗೆ ಅಲಂಕಾರಕ್ಕೆ ಸಂಬಂಧಿಸಿದ ಪುಸ್ತಕಗಳು ನೀರೀಕ್ಷೆಗಿಂತಲೂ ಹೆಚ್ಚು ಮಾರಾಟ ಕಂಡವು.
ಬೆಂಗಳೂರು ಮತ್ತು ಸುತ್ತಣ ನಗರಗಳ ಶಿಕ್ಷಣ ಸಂಸ್ಥೆಗಳೂ ಈ ಬಾರಿಯ ಪುಸ್ತಕೋತ್ಸವದಲ್ಲಿ ಭಾಗವಹಿಸಿ ತಮ್ಮ ಗ್ರಂಥಾಲಯಗಳಿಗಾಗಿ ವಿವಿದ ಪುಸ್ತಕಗಳನ್ನು ಖರೀದಿಸಿದ್ದು ಮಾರಾಟದ ಭರಾಟೆ ಹೆಚ್ಚಲು ಕಾರಣವಾಯಿತು.
|