ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ದತ್ತಮಾಲಾ ಅಭಿಯಾನ:ಚಿಕ್ಕಮಗಳೂರಲ್ಲಿ ಬಿಗಿ ಭದ್ರತೆ
ಚಿಕ್ಕಮಗಳೂರು ಜಿಲ್ಲೆ ದತ್ತ ಪೀಠದಲ್ಲಿ ನಡೆಯಲಿರುವ ದತ್ತ ಮಾಲಾ ಅಭಿಯಾನ ಸಂದರ್ಭದಲ್ಲಿ ಅಹಿತಕರ ಘಟನೆಗಳು ಜರುಗದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಪೊಲೀಸ್ ಮಹಾ ನಿರ್ದೇಶಕ ಕೆ.ಆರ್.ಶ್ರೀನಿವಾಸನ್ ತಿಳಿಸಿದ್ದಾರೆ.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,"ಕೇಂದ್ರ ಸಶಸ್ತ್ರ ಮೀಸಲು ಪಡೆಯ ಎರಡು ತುಕಡಿಗಳನ್ನು ಕರೆಸಲಾಗಿದ್ದು, ಕರ್ನಾಟಕ ರಾಜ್ಯ ಮೀಸಲು ಪಡೆ ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗುವುದು. ಪರಿಸ್ಥಿತಿಯನ್ನು ಅವಲೋಕಿಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರನ್ನು ದತ್ತಪೀಠಕ್ಕೆ ಕಳಿಸಲಾಗಿದೆ ಎಂದು ಹೇಳಿದರು.

ಸಂಸ್ಮರಣ ದಿನಾಚರಣೆ:

ಮೈಸೂರು ರಸ್ತೆಯಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ನಡೆದ ಪೊಲೀಸ್ ಸಂಸ್ಮರಣ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ತವ್ಯದಲ್ಲಿದ್ದಾಗ ವೀರ ಮರಣ ಅಪ್ಪಿದ ಪೊಲೀಸರ ತ್ಯಾಗವನ್ನು ಸ್ಮರಿಸಿಕೊಳ್ಳಲು ಪ್ರತಿ ವರ್ಷ ಅ.21 ರಂದು ದೇಶಾದ್ಯಂತ ಪೊಲೀಸ್ ಸಂಸ್ಮರಣ ದಿನ ಆಚರಿಸಲಾಗುತ್ತದೆ ಎಂದರು.

ನಂತರ ರಾಜ್ಯದಲ್ಲಿ ಕಳೆದ ವರ್ಷ ಸಾವನ್ನಪ್ಪಿದ 11 ಪೊಲೀಸ್ ಸಿಬ್ಬಂದಿಗಳ ಕುಟುಂಬಗಳಿಗೆ ಪರಿಹಾರ ವಿತರಿಸಿದರು.


ಮತ್ತಷ್ಟು
ಪುಸ್ತಕೋತ್ಸವ-2007 ಮುಕ್ತಾಯ
ರಾಜ್ಯಾದ್ಯಂತ ದಸರಾ, ಶಾರದಾಪೂಜೆ ಸಂಭ್ರಮ
ಸರಕಾರ ರಚನೆ:ಜೆಡಿ(ಎಸ್) ಮಹತ್ವದ ಸಭೆ
ಇಂದು ವಿಶ್ವ ವಿಖ್ಯಾತ ಜಂಬೂಸವಾರಿ
ಬೆಂಗಳೂರು:ಬಾಲಾಪರಾಧಿಗಳು ಪರಾರಿ
ಜಂಬೂ ಸವಾರಿ:ವಾಹನ ಸಂಚಾರ ಮಾರ್ಗ ಬದಲಾವಣೆ