ಅಮಾನತಿನಲ್ಲಿರುವ ರಾಜ್ಯ ವಿಧಾನಸಭೆಯ ರಾಜಕೀಯ ಚಟುವಟಿಕೆಗಳಿಗೆ ಮರು ಚಾಲನೆ ದೊರೆತಿದ್ದು, ಮಾಜಿ ಗೃಹ ಸಚಿವ, ಜಾತ್ಯತೀತ ಜನತಾ ದಳ ಮುಖಂಡ ಎಂ.ಪಿ.ಪ್ರಕಾಶ್ ಅವರು ಹಠಾತ್ತನೆ ದೆಹಲಿಗೆ ದೌಡಾಯಿಸಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗಳು ಸರಕಾರ ರಚನೆಗೆ ಒಳಗಿಂದೊಳಗೆ ತಂತ್ರ-ಪ್ರತಿ ತಂತ್ರಗಳನ್ನು ಹೂಡುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರಕಾಶ್ ಅವರ ಹಠಾತ್ ದೆಹಲಿ ಭೇಟಿ ಭಾರಿ ಕುತೂಹಲ ಕೆರಳಿಸಿದೆ.
ಪ್ರಕಾಶ್ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ರಾಜ್ಯ ರಾಜಕೀಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮಧ್ಯೆ ಮೈತ್ರಿ ಏರ್ಪಟ್ಟು ಬಾಕಿ ಉಳಿದ ವಿಧಾನಸಭೆಯ ಅವಧಿಯನ್ನು ಉಭಯ ಪಕ್ಷಗಳೂ ಅನುಭವಿಸುವ ಸಿದ್ಧತೆ ನಡೆಸುತ್ತಿವೆ ಎಂಬ ಊಹಾಪೋಹಗಳು ಬಲಗೊಂಡಿವೆ.
|