ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮೈತ್ರಿ, ಚುನಾವಣೆ ಜೆಡಿಎಸ್ ನಿರ್ಧಾರ
ಅಧಿಕಾರ ಹಸ್ತಾಂತರ ಗೊಂದಲದಿಂದಾಗಿ ಅಧಿಕಾರ ಕಳೆದುಕೊಂಡಿರುವ ಜೆಡಿಎಸ್ ಮರುಮೈತ್ರಿ ನಡೆಸಬೇಕೇ ಅಥವಾ ಚುನಾವಣೆಯ ಮೊರೆ ಹೋಗಬೇಕೇ ಎಂಬ ಬಗ್ಗೆ ನಾಳೆ ನಿರ್ಧರಿಸಲಿದೆ. ಪಕ್ಷದ ರಾಷ್ಟ್ತ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

ಇಂದು ಪಕ್ಷದ ಮುಮದಿನ ನಿರ್ಧಾರದ ಬಗ್ಗೆ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಈ ನಡುವೆ ಬಹುತೇಕ ಜೆಡಿಎಸ್ ಶಾಸಕರು ಮತ್ತೆ ಚುನಾವಣೆಗೆ ಹೋಗಲು ನಿರಾಕರಿಸಿದ್ದು ಇದರಿಂದಾಗಿ ಪಕ್ಷದೊಳಗೆ ಆಂತರಿಕ ಬಿಕ್ಕಟ್ಟು ತಲೆದೋರಿದೆ.

ವಚನ ಭ್ರಷ್ಟತೆಯ ಹಿನ್ನೆಲೆಯಲ್ಲಿ ಪಕ್ಷ ಮತ್ತೆ ಚುನಾವಣೆಗೆ ಹೋದಲ್ಲಿ ಭಾರೀ ಪ್ರಮಾಣದ ಸೋಲನ್ನು ಒಪ್ಪಿಕೊಳ್ಳಬೇಕಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಮತ್ತೆ ಬಿಜೆಪಿಯೊಂದಿಗೆ ಮರುಮೈತ್ರಿ ಮಾಡಿಕೊಳ್ಳುವ ಇರಾದೆ ವ್ಯಕ್ತಪಡಿಸಿರುವ ಕೆಲ ಶಾಸಕರ ನಿರ್ಧಾರಕ್ಕೆ ಜೆಡಿಎಸ್ ಯಾವ ರೀತಿ ಮನ್ನಣೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಮತ್ತಷ್ಟು
'ರಾಜ್ಯ'ಕಾರಣ: ಎಂ.ಪಿ.ಪ್ರಕಾಶ್ ದೆಹಲಿಗೆ ದೌಡು
ಸಮ್ಮಿಶ್ರ ಸರಕಾರ ರಚನೆಗೆ ಪಕ್ಷೇತರರ ಆಸಕ್ತಿ
ದತ್ತಮಾಲಾ ಅಭಿಯಾನ:ಚಿಕ್ಕಮಗಳೂರಲ್ಲಿ ಬಿಗಿ ಭದ್ರತೆ
ಪುಸ್ತಕೋತ್ಸವ-2007 ಮುಕ್ತಾಯ
ರಾಜ್ಯಾದ್ಯಂತ ದಸರಾ, ಶಾರದಾಪೂಜೆ ಸಂಭ್ರಮ
ಸರಕಾರ ರಚನೆ:ಜೆಡಿ(ಎಸ್) ಮಹತ್ವದ ಸಭೆ