ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮೈತ್ರಿ ತೀರ್ಮಾನ ಹೈಕಮಾಂಡ್‌ಗೆ-ಖರ್ಗೆ
ಜೆಡಿಎಸ್ ಮತ್ತು ಕಾಂಗ್ರೆಸ್ ಮರುಮೈತ್ರಿ ತೀರ್ಮಾನ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.

ಇಂದು ಕಾಂಗ್ರೆಸ್ ಪ್ರಮುಖ ನಾಯಕರ ಸಭೆ ನಡೆದಿದ್ದು ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ಸ್ಪಷ್ಟಪಡಿಸಿದರು. ಪಕ್ಷ ನವೆಂಬರ್ 5ರಂದು ಬೃಹತ್ ಸಮಾವೇಶ ನಡೆಸಲು ಸಿದ್ಧತೆ ನಡೆಸಿದೆ ಎಂದು ಪ್ರಕಟಿಸಿದ್ದಾರೆ.

ದೆಹಲಿಯಲ್ಲಿ ಬೀಡು ಬಿಟ್ಟಿರುವ ಎಂಪಿ ಪ್ರಕಾಶ್ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪತನಗೊಂಡ ಹಿನ್ನೆಲೆಯಲ್ಲಿ ಈ ಸಮಾವೇಶಕ್ಕೆ ಹೆಚ್ಚಿನ ಮಹತ್ವ ಬಂದಿದೆ.

ಈಗಾಗಲೇ ಅಧಿಕಾರ ವಂಚಿತ ಬಿಜೆಪಿ ರಾಜ್ಯದಾದ್ಯಂತ ಧರ್ಮಯಾತ್ರೆ ಆರಂಭಿಸಿದ್ದರೆ, ಜೆಡಿಎಸ್ ವಿಶಾಲ ಪಾದಯಾತ್ರೆ ಆಯೋಜಿಸಿದೆ.

ಈ ನಡುವೆ ಕಾಂಗ್ರೆಸ್ ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ರಾಜ್ಯಾದ್ಯಂತ ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲು ಇಂದು ನಡೆದ ಸಭೆಯಲ್ಲಿ ನಿರ್ಧರಿಸಿದೆ.
ಮತ್ತಷ್ಟು
ಎಂ.ಪಿ ಪ್ರಕಾಶ್,ಕಾಂಗ್ರೆಸ್ ಮುಖಂಡರ ಭೇಟಿ
ನಾ ಡಿಸೋಜಾಗೆ ವರ್ಧಮಾನ ಪೀಠ ಪ್ರಶಸ್ತಿ
ದತ್ತಪೀಠ: ಬಿಗಿ ಬಂದೋಬಸ್ತ್
ಬೃಹತ್ ಸಮಾವೇಶ:ಕಾಂಗ್ರೆಸ್ ಸಭೆ
ಮೈತ್ರಿ, ಚುನಾವಣೆ ಜೆಡಿಎಸ್ ನಿರ್ಧಾರ
'ರಾಜ್ಯ'ಕಾರಣ: ಎಂ.ಪಿ.ಪ್ರಕಾಶ್ ದೆಹಲಿಗೆ ದೌಡು