ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಹೆಗ್ಗಡೆಯವರ 40ನೇ ಪಟ್ಟಾಭಿಷೇಕ
ಇಂದು ಪದ್ಮಭೂಷಣ ಡಾ.ವೀರೇಂದ್ರ ಹೆಗ್ಗಡೆಯವರ 40ನೇ ಪಟ್ಟಾಭಿಷೇಕದ ಸಂಭ್ರಮ ಕಾರ್ಯಕ್ರಮ.

ಕಳೆದ 40 ವರ್ಷಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರನ್ನು ನಾಡಿನೆಲ್ಲೆಡೆ ಪಸರಿಸಲು ಕಾರಣರಾದ ಅವರ ಇಚ್ಛಾಶಕ್ತಿ ದೊಡ್ಡದು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯನ್ನು ಕಾರ್ಯರೂಪಕ್ಕಿಳಿಸುವ ಮೂಲಕ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಲು ಶ್ರಮವನ್ನು ವಹಿಸಿದವರಲ್ಲಿ ಅವರು ಮೊದಲಿಗರು.

"ನಡೆದಾಡುವ ಮಂಜುನಾಥ, ಮಾತನಾಡುವ ದೇವರು" ಎಂದೆಲ್ಲಾ ಕರೆಸಿಕೊಳ್ಳುವ ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮಸ್ದಳದ ಹೆಗ್ಗಡೆ ಪಟ್ಟಕ್ಕೆ ಏರಿ ಇಂದಿಗೆ 40ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

ಹೆಗ್ಗಡೆಯವರು ಧರ್ಮಸ್ದಳವೆಂಬ ಪುಟ್ಟ ಊರನ್ನು ಅಂತಾರಾಷ್ಟ್ತ್ರೀಯ ಮಟ್ಟಕ್ಕೆ ಕೊಂಡೊಯ್ದು, ಊರಿನ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಕಾರಣರಾಗಿದ್ದಾರೆ.

ಉಜಿರೆಯಂತಹ ಪುಟ್ಟೂರಿನಲ್ಲಿ ಕೆಜಿಯಿಂದ ಪಿಜಿ ತನಕ ಶಿಕ್ಷಣ ಸಂಸ್ತೆಗಳನ್ನು ಸ್ಥಾಪಿಸಿ ವಿದ್ಯಾದಾನವನ್ನು ನೀಡುತ್ತಿದ್ದಾರೆ. ಇಂದು ಹೆಗ್ಗಡೆಯವರ 40ನೇ ಪಟ್ಟಾಭಿಷೇಕದ ಸಂಬ್ರಮ ಕಾರ್ಯಕ್ರಮದ ಅಂಗವಾಗಿ ಸಂಜೆ ಶ್ರೀ ಕ್ಷೇತ್ರದಲ್ಲಿ ವಿವಿಧ ಸಾಂಸ್ಕ್ಕತಿಕ ಕಾರ್ಯಕ್ರಮಗಳು ನಡೆಯಲಿವೆ.
ಮತ್ತಷ್ಟು
ಮರುಮೈತ್ರಿ ತಳಮಳ: ವಿದಳನೆಯತ್ತ ದಳ
ಶ್ರೀಘ್ರದಲ್ಲಿ ನಾಟಕ ಶಾಲೆ ಆರಂಭ
ಮೈತ್ರಿ ತೀರ್ಮಾನ ಹೈಕಮಾಂಡ್‌ಗೆ-ಖರ್ಗೆ
ಎಂ.ಪಿ ಪ್ರಕಾಶ್,ಕಾಂಗ್ರೆಸ್ ಮುಖಂಡರ ಭೇಟಿ
ನಾ ಡಿಸೋಜಾಗೆ ವರ್ಧಮಾನ ಪೀಠ ಪ್ರಶಸ್ತಿ
ದತ್ತಪೀಠ: ಬಿಗಿ ಬಂದೋಬಸ್ತ್