ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕೆಪಿಸಿಸಿ ಪುನಾರಚನೆ ಸದ್ಯಕ್ಕಿಲ್ಲ ; ಖರ್ಗೆ
ಕೆಪಿಸಿಸಿ ಪುನಾರಚನೆ ಬಗ್ಗೆ ಹೈಕಮಾಂಡ್‌ನಿಂದ ಯಾವುದೇ ಮಾಹಿತಿ ಬಂದಿಲ್ಲ. ಈ ಕುರಿತಂತೆ ಯಾವುದೇ ಬೆಳವಣಿಗೆಗಳು ಸದ್ಯಕ್ಕಿಲ್ಲ ಎಂದು ಪ್ರದೇಶ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

"ಹೊಸ ಪದಾಧಿಕಾರಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಲಾಗಿದೆ. ಆದರೆ ಪುನಾರಚನೆ ಸಂಬಂಧ ವರಿಷ್ಢರಿಂದ ಇದುವರೆಗೆ ಯಾವುದೇ ಸೂಚನೆ ಬಂದಿಲ್ಲ. ಎಂದು ತಿಳಿಸಿದರು.

ಎಂ.ಪಿ.ಪ್ರಕಾಶ್ ಅವರು ದಿಲ್ಲಿಯಲ್ಲಿ ಕೇಂದ್ರ ಗೃಹಸಚಿವ ಶಿವಾರಾಜ್ ಪಾಟೀಲ್ ರನ್ನು ಭೇಟಿಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಶಿವಾರಾಜ್ ಪಾಟೀಲ್ ಮತ್ತು ಪ್ರಕಾಶ್ ಅವರ ಭೇಟಿಯ ವಿವರ ನನ್ನಲ್ಲಿಲ್ಲ. ಜೆಡಿಯಸ್ ಜತೆ ಮರು ಮೈತ್ರಿ ಮಾಡಿಕೊಂಡು ಕಾಂಗ್ರೇಸ್ ಸರಕಾರ ರಚಿಸಲಿದೆಯೇ, ಇಲ್ಲವೋ ಎಂಬ ಪ್ರಶ್ನೆಗೆ ಉತ್ತರಿ ಸುವುದು ಅಸಾಧ್ಯ. ಅದೇನಿದ್ದರೂ ಹೈಕಮಾಂಡ್ ವಿವೇಚನೆಗೆ ಬಿಟ್ಟವಿಚಾರ" ಎಂದು ತಿಳಿಸಿದರು.
ಮತ್ತಷ್ಟು
ನಗರಕ್ಕೆ ಆಗಮಿಸಿದ ಎಂ.ಪಿ.ಪ್ರಕಾಶ್
ಮೌಲ್ಯಯುಕ್ತ ಕಟ್ಟಡಗಳಿಗೆ ಮರು ಮೌಲ್ಯ ಮಾಪನ : ಆಯುಕ್ತರು
ಹೆಗ್ಗಡೆಯವರ 40ನೇ ಪಟ್ಟಾಭಿಷೇಕ
ಮರುಮೈತ್ರಿ ತಳಮಳ: ವಿದಳನೆಯತ್ತ ದಳ
ಶ್ರೀಘ್ರದಲ್ಲಿ ನಾಟಕ ಶಾಲೆ ಆರಂಭ
ಮೈತ್ರಿ ತೀರ್ಮಾನ ಹೈಕಮಾಂಡ್‌ಗೆ-ಖರ್ಗೆ