ನಗರದಲ್ಲಿನ ಚಿತ್ರ ಮಂದಿರಗಳಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಕ್ಲೋಸ್ ಸರ್ಕ್ಯೂಟ್ ಕ್ಯಾಮೆರಾ ಕಾರ್ಯನಿರ್ವಹಿಸಲಿದೆ.
ಮಹಾನಗರಗಳಲ್ಲಿ ಹೆಚ್ಚಿರುವ ಉಗ್ರಗಾಮೀ ಚಟುವಟಿಕೆಗಳ ಹಿನ್ನೆಲೆಯಲ್ಲಿ ಬಾಂಬ್ ಪತ್ತೆ ಉಪಕರಣ ಅಳವಡಿಸಿ ಕೊಳ್ಳುವಂತೆ ನಗರ ಪೊಲೀಸ್ ಆಯುಕ್ತ ನೀಲಂ ಅಚ್ಯುತ್‌ರಾವ್ ಚಿತ್ರಮಂದಿರಗಳ ಮಾಲೀಕರಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಭದ್ರತಾ ದೃಷ್ಟ್ಟಿಯಿಂದ ಚಲನಚಿತ್ರ ಮಂದಿರ ಮಾಲಿಕರು ಈ ಕ್ರಮಗ ಳನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
ಸೂಚನೆ ಹೀಗೆ:
* ಚಿತ್ರಮಂದಿರದ ಪ್ರವೇಶದ್ವಾರದ ಬಳಿ ಬಾಂಬ್ ಪತ್ತೆ ಉಪಕರಣ ಅಳವಡಿಸಬೇಕು.
*ಪ್ರೇಕ್ಷಕರು ಒಳ ಬರುವಾಗ ದೈಹಿಕ ತಪಾಸಣೆ ನಡೆಸಬೇಕು.
*ಚಿತ್ರ ಆರಂಭವಾದ ನಂತರ ಮುಗಿಯುವ ವರೆಗೆ ಯಾರನ್ನೂಹೊರಕ್ಕೆ ಬಿಡಬಾರದು.
* ಟಿಫನ್ ಕ್ಯಾರಿಯರ್, ರೇಡಿಯೊ,ಶೆಲ್, ವೈರ್,ಕಟಿಂಗ್ ಪ್ಲೇಯರ್ ಹೊಂದಿರುವ ವ್ಯಕ್ತಿಗಳು ಸಿನಿಮಾ ನೋಡಲು ಬಂದರೆ, ಹಳೆಯ ಕಾರ್,ಸ್ಕೂಟರ್ -ಬೈಕ್‌ಗಳನ್ನು ಚಿತ್ರಮಂದಿರದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.
|