ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸರ್ಕಾರ ರಚನೆಗೆ ಜೆಡಿಎಸ್ ಕಸರತ್ತು
ಪ್ರಕಾಶ್, ಅಹಮದ್ ಪಟೇಲ್ ಮಾತುಕತೆ 26 ರಂದು
ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯ ಕಸರತ್ತು ನಡೆಸಿರುವ ಜೆಡಿಎಸ್ ನಾಯಕ ಎಂ.ಪಿ.ಪ್ರಕಾಶ್ ಅ.26 ರಂದು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಜತೆ ದೆಹಲಿಯಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.

ಪ್ರಕಾಶ್ ಬೆಂಬಲಕ್ಕೆ ಜೆಡಿಯಸ್ 9 ಜನ ಶಾಸಕರು ಇನ್ನೂ ದೆಹಲಿಯಲ್ಲಿದ್ದು ಸರ್ಕಾರ ರಚನೆ ಪ್ರಯತ್ನ ಒಂದು ರೂಪ ಪಡೆದ ನಂತರವೇ ವಿವರಗಳನ್ನು ಮಾಧ್ಯಮಕ್ಕೆ ತಿಳಿಸಲಿದ್ದಾರೆ.

ಈ ಮಧ್ಯೆ ಜೆಡಿಯಸ್‌ನಲ್ಲಿ ಪಕ್ಷದ ವರಿಷ್ಟ ಎಚ್.ಡಿ ದೇವೇಗೌಡರ ಕೆಂಗೆಣ್ಣಿಗೆ ಗುರಿಯಾಗಿರುವ ಪ್ರಕಾಶ್ ಸರ್ಕಾರ ರಚನೆಗೆ ಸಂಬಂಧಿಸಿ ತಮ್ಮ ಮಾತನ್ನು ಉಲ್ಲಂಘಿಸಿರುವ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ತಮ್ಮ ಬೆಂಬಲಿಗ ಶಾಸಕರ ತಂಡದೊಂದಿಗೆ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್, ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್, ಅವರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ಹೊತ್ತ ಪೃಥ್ವಿರಾಜ್ ಚವ್ಹಾಣ್ , ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಪ್ರತಿ ಪಕ್ಷದ ನಾಯಕ ಧರ್ಮಸಿಂಗ್ ಅವರಲ್ಲಿ ಮೈತ್ರಿಯ ಕುರಿತಾದ ಹೆಚ್ಚಿನ ಮಾಹಿತಿಯಿಲ್ಲ.

ಬುಧವಾರ ರಾತ್ರಿ ಸಿದ್ದರಾಮಯ್ಯ ,ಮಾಜಿ ಮಂತ್ರಿ ಡಿ.ಕೆ ಶಿವಕುಮಾರ್ ಮತ್ತಿತರ ಕೆಲವು ನಾಯಕರು ಸಭೆ ಸೇರಿ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಿದರು ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆ ಸರ್ಕಾರ ರಚಿಸುವ ಕಸರತ್ತಿಗೆ ಪುಷ್ಟಿ ನೀಡಿದೆ.
ಮತ್ತಷ್ಟು
ಸಂಕೀರ್ತನ ಯಾತ್ರೆಗೆ ಬಿಗಿ ಬಂದೋ ಬಸ್ತ್
ಥಿಯೇಟರುಗಳಲ್ಲಿ ಕ್ಲೋಸ್ ಸರ್ಕ್ಯೂಟ್ ಕ್ಯಾಮರಾ:
ಕೆಪಿಸಿಸಿ ಪುನಾರಚನೆ ಸದ್ಯಕ್ಕಿಲ್ಲ ; ಖರ್ಗೆ
ನಗರಕ್ಕೆ ಆಗಮಿಸಿದ ಎಂ.ಪಿ.ಪ್ರಕಾಶ್
ಮೌಲ್ಯಯುಕ್ತ ಕಟ್ಟಡಗಳಿಗೆ ಮರು ಮೌಲ್ಯ ಮಾಪನ : ಆಯುಕ್ತರು
ಹೆಗ್ಗಡೆಯವರ 40ನೇ ಪಟ್ಟಾಭಿಷೇಕ