ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮೈತ್ರಿ ಸರಕಾರ ರಚನೆ ಇಲ್ಲ-ದೇವೇಗೌಡ
ರಾಜ್ಯರಾಜಕಾರಣದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಜತೆ ಸೇರಿ ಸರಕಾರ ರಚಿಸುವ ಪ್ರಮೇಯ ಇಲ್ಲ ಎಂದು ಜಾತ್ಯತೀತ ಜನತಾದಳದ ಅಧ್ಯಕ್ಷ ಎಚ್.ಡಿ.ದೇವೇಗೌಡರು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದಲ್ಲಿ ಎರಡನೇ ಬಾರಿಗೆ ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರಕಾರ ರಚನೆಯಾಗುತ್ತದೆ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್‌ನೊಂದಿಗಿನ ಹೊಂದಾಣಿಕೆಯನ್ನು ತಳ್ಳಿ ಹಾಕಿದರು.

ಬೆಂಗಳೂರಿನಲ್ಲಿ ಕಿಕ್ಕಿರಿದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕೂಡಲೇ ಅಸೆಂಬ್ಲಿಯನ್ನು ವಿಸರ್ಜಿಸಿ,ರಾಜ್ಯದಲ್ಲಿ ಚುನಾವಣೆಯನ್ನು ಘೋಷಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಸರಕಾರ ಅಧಿಕಾರ ಹಸ್ತಾಂತರ ಬಿಕ್ಕಟ್ಟಿನಿಂದ ಪತನಗೊಂಡ ನಂತರ ಇದೀಗ ರಾಷ್ಟ್ರಪತಿ ಆಡಳಿತ ಹೇರಲಾಗಿದೆ.

ಆದರೆ ಏತನ್ಮಧ್ಯೆ ಜೆಡಿಎಸ್ ಹಿರಿಯ ಮುಖಂಡ ಎಂ.ಪಿ.ಪ್ರಕಾಶ್ ಅವರು ದೇವೇಗೌಡರ ಅನುಮತಿ ಪಡೆಯದೇ ದೆಹಲಿಗೆ ತೆರಳಿ ಗೃಹ ಸಚಿವ ಶಿವರಾಜ್ ಪಾಟೀಲ್,ಪೃಥ್ವಿರಾಜ್ ಚೌವಾಣ್ ಹಾಗೂ ಮೋತಿಲಾಲ್ ವೋರಾ ಅವರನ್ನು ಭೇಟಿಯಾಗಿ ಪರ್ಯಾಯ ಸರಕಾರ ರಚಿಸುವ ಬಗ್ಗೆ ಮಾತುಕತೆ ನಡೆಸಿದ್ದರು.
ಮತ್ತಷ್ಟು
ಸರ್ಕಾರ ರಚನೆಗೆ ಜೆಡಿಎಸ್ ಕಸರತ್ತು
ಸಂಕೀರ್ತನ ಯಾತ್ರೆಗೆ ಬಿಗಿ ಬಂದೋ ಬಸ್ತ್
ಥಿಯೇಟರುಗಳಲ್ಲಿ ಕ್ಲೋಸ್ ಸರ್ಕ್ಯೂಟ್ ಕ್ಯಾಮರಾ:
ಕೆಪಿಸಿಸಿ ಪುನಾರಚನೆ ಸದ್ಯಕ್ಕಿಲ್ಲ ; ಖರ್ಗೆ
ನಗರಕ್ಕೆ ಆಗಮಿಸಿದ ಎಂ.ಪಿ.ಪ್ರಕಾಶ್
ಮೌಲ್ಯಯುಕ್ತ ಕಟ್ಟಡಗಳಿಗೆ ಮರು ಮೌಲ್ಯ ಮಾಪನ : ಆಯುಕ್ತರು