ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸ್ಥಳೀಯ ಸಂಸ್ಥೆಗಳಿಗೆ ದಕ್ಕದ ಜನಪ್ರತಿನಿಧಿಗಳ ಆಡಳಿತ
ಕೋಟ್ಯಾಂತರ ರೂ.ಗಳ ಸಾರ್ವಜನಿಕರ ಹಣವನ್ನು ವೆಚ್ಚಮಾಡಿ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಕೆಲ ವಾರಗಳೇ ಕಳೆದರೂ ವಿವಿಧೆಡೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಾಧ್ಯವಾಗದೆ ಜನಪ್ರತಿನಿಧಿಗಳ ಆಡಳಿತ ಕಾಣದಂತಾಗಿದೆ.

ಸರ್ಕಾರದ ವಿಳಂಬದ ನೀತಿ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲು ನಿಯಮಗಳು ಹಾಗೂ ಯಾವ ವರ್ಗಕ್ಕೆ ಮೀಸಲಾಗಬೇಕೆನ್ನುವ ನಿಯಮಗಳನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ.

ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳ ಸ್ಥಾನಗಳನ್ನು ಸಾಮಾಜಿಕ ನ್ಯಾಯ ವಿತರಣೆಯ ತತ್ವದ ಆಧಾರದ ಮೇಲೆ ಮೀಸಲು ವ್ಯವಸ್ಥೆಗೆ ಒಳಪಡಿಸಿದಾಗ ಇದರಿಂದ ದುರ್ಬಲರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮಾನ್ಯತೆ, ಗೌರವ, ಸ್ಥಾನಮಾನ ಸಿಗುವ ದಾರಿ ಸುಗಮವಾಗಿದೆ ಎನ್ನುವುದು ಜನರ ನಂಬಿಕೆ. ಕಾರಣಗಳು ಏನೇ ಇದ್ದರೂ ಆದರೆ ಆ ರೀತಿಯಾಗಿಲ್ಲ. ಹಾಗಾಗಿ ಜನರು ಇಡೀ ವ್ಯವಸ್ಥೆಯನ್ನು ದೂಷಿಸುವಂತಾಗಿದೆ.

ಮೀಸಲು ಸ್ಥಾನಗಳನ್ನು ನಿಗದಿ ಪಡಿಸುವ ಅಧಿಕಾರ ನಿಜಕ್ಕೂ ಸರ್ಕಾರಕ್ಕೆ ಅನಗತ್ಯ. ಆ ಜವಾಬ್ದಾರಿ ನಿರ್ವಹಣೆಗೆ ಸೂಕ್ತ ನಿಯಮಗಳನ್ನು ರಚಿಸಿ, ಅದನ್ನು ಕಾರ್ಯಗತಗೊಳಿಸುವ ಅಧಿಕಾರವನ್ನು ಚುನಾವಣೆ ಆಯೋಗಕ್ಕೆ ನೀಡಬೇಕಾಗಿದೆ.
ಮತ್ತಷ್ಟು
ರಾಜ್ಯಪಾಲರಿಂದ ಜನತಾ ದರ್ಶನ ವಿಕೇಂದ್ರೀಕರಣ
ಚುನಾವಣೆ ಅನಿವಾರ್ಯ: ಯಡಿಯೂರಪ್ಪ
ಮೈತ್ರಿ ಸರಕಾರ ರಚನೆ ಇಲ್ಲ-ದೇವೇಗೌಡ
ಸರ್ಕಾರ ರಚನೆಗೆ ಜೆಡಿಎಸ್ ಕಸರತ್ತು
ಸಂಕೀರ್ತನ ಯಾತ್ರೆಗೆ ಬಿಗಿ ಬಂದೋ ಬಸ್ತ್
ಥಿಯೇಟರುಗಳಲ್ಲಿ ಕ್ಲೋಸ್ ಸರ್ಕ್ಯೂಟ್ ಕ್ಯಾಮರಾ: