ಕರ್ನಾಟಕ ರಾಜಕೀಯದಲ್ಲಿ ಮೂರು ಪಕ್ಷಗಳದ್ದೇ ಕರಾಮತ್ತು. ಅದರಲ್ಲಿ ಜೆಡಿಎಸ್ ಕಡಿಮೆ ಶಾಸಕರ ಸಂಖ್ಯೆಯನ್ನು ಹೊಂದಿದ್ದರೂ ಅಧಿಕಾರ ಅನುಭವಿಸಿ ಉಳಿದ ಎರಡು ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಾಕಷ್ಟು ತೊಂದರೆ ನೀಡಿ ರಾಷ್ಠ್ತ್ರಪತಿ ಆಡಳಿತಕ್ಕೆ ದಾರಿ ಮಾಡಿಕೊಟ್ಟಿದೆ.
ಜೆಡಿಎಸ್ ವರಿಷ್ಠರ ಅನುಮತಿ ಇಲ್ಲದೇ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಲು ಮುಂದಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುವ ಪರಿಸ್ಥಿತಿ. ಅವರು ಈ ಕ್ರಮಕ್ಕೆ ಏಕೆ ಮುಂದಾದರು ತಿಳಿಯುತ್ತಿಲ್ಲ.
ಮೂರು ಪಕ್ಷಗಳಲ್ಲೂ ಅನೇಕ ಶಾಸಕರಿಗೆ ಮಧ್ಯಂತರ ಚುನಾವಣೆ ಎದುರಿಸುವ ಸಾಮರ್ಥ್ಯವಿಲ್ಲ. ಹಾಗಾಗಿ ಚುನಾವಣೆ ಬೇಡದವರು ಎಂ.ಪಿ.ಪ್ರಕಾಶ್ ಅವರನ್ನು ಪುಸಲಾಯಿಸಿದ್ದಾರೆ ಎನ್ನುವುದು ಶಾಸಕರ ವಲಯದ ಮಾತು.
ಆದರೆ ಜೆಡಿಎಸ್ ಹಿರಿಯನಾಯಕರೇ ಈ ರೀತಿಯ ನಾಟಕ ವಾಡಿಸುತ್ತಿದ್ದಾರೆ ಎನ್ನುವುದು ಇನ್ನು ಕೆಲವರ ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಜನಹಿತ ಸಾಧನೆಯ ದೃಷ್ಟಿಯಿಂದ ಹಿಂದೆ ಕಾಂಗ್ರೆಸ್ ಜತೆ ಸೇರಿದ್ದನ್ನು ಮತ್ತು ನಂತರ ಬಿಜೆಪಿ ಜತೆ ಸೇರಿಕೊಂಡಿದ್ದನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಸಮರ್ಥಿಸಿಕೊಳ್ಳುವುದನ್ನು ಯಾವ ಅನೇಕ ಶಾಸಕರು ಒಪ್ಪುತ್ತಿಲ್ಲ. ಸಮಾನ ಮನಸ್ಕರ ಅಥವಾ ಪಕ್ಷಾಂತರಕ್ಕೆ ಸಿದ್ಧವಾಗಿರುವ ಶಾಸಕರ ಹಿಂಡಿನಿಂದ ಸರ್ಕಾರ ರಚನೆ ಮಾಡಲು ಹೋಗಿ ಹಿರಿಯ ರಾಜಕಾರಣಿ ಎಂ.ಪಿ. ಪ್ರಕಾಶ್ ರಾಜಕೀಯ ಸುಳಿಯಲ್ಲಿ ಸಿಲುಕಿದ್ದಾರೆ.
ಆ ನಿಶ್ಚಿತತೆಯನ್ನು ಅಂತ್ಯಗೊಳಿಸಲು ಜವಾಬ್ದಾರಿಯುತ ರಾಜಕೀಯ ಪಕ್ಷಗಳು ಮುಂದಾಗಲೇ ಬೇಕಿದೆ.
|