ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಉಡುಪಿ: 30ರಂದು ರಾಷ್ಟ್ತ್ರೀಯ ಹೆದ್ದಾರಿ ಬಂದ್
ಜಿಲ್ಲೆಯನ್ನು ಹಾದುಹೋಗುವು 107 ಕಿ.ಮೀ. ಉದ್ದದ ರಾಷ್ಟ್ತ್ರೀಯ ಹೆದ್ದಾರಿಯ ದುಃಸ್ಥಿತಿಯನ್ನು ಪ್ರತಿಭಟಿಸಿ ಕೇಂದ್ರ ಸರ್ಕಾರದ ಗಮನವನ್ನು ಸೆಳೆಯಲು ಜಿಲ್ಲೆಯ ಜನರು ಅ. 30ರಂದು 24 ಗಂಟೆಕಾಲ ಸಂಪೂರ್ಣ ರಾಷ್ಟ್ತ್ರೀಯ ಹೆದ್ದಾರಿಯನ್ನು ಬಂದ್ ಮಾಡಲಿದ್ದಾರೆ.

ರಾಷ್ಟ್ತ್ರೀಯ ಹೆದ್ದಾರಿ 17 ರನ್ನು ಉಳಿಸಲೆಂದೇ ಹುಟ್ಟಿಕೊಂಡಿರುವ ರಾಷ್ಟ್ತ್ರೀಯ ಹೆದ್ದಾರಿ ಉಳಿಸಿ ಸಮಿತಿ ಸಭೆ ನಡೆಸಿದೆ.

ಸಭೆಯಲ್ಲಿ ಭಾಗವಹಿಸಿದ ಮಾಜಿ ಸಚಿವ ಡಾ. ವಿ.ಎಸ್. ಆಚಾರ್ಯ ಸೇರಿದಂತೆ ಜಿಲ್ಲೆಯ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥಗಳ ಪದಾಧಿಕಾರಿಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ದಕ್ಷಿಣದ ಹೆಜಮಾಡಿಯಿಂದ ಉತ್ತರದ ಶೀರೂರಿನ ವರೆಗೆ 22 ಮುಖ್ಯ ಜಂಕ್ಷನ್‌ಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ಹೆದ್ದಾರಿ ಬಂದ್ ನಡೆಸಲು ತೀರ್ಮಾನಿಸಲು ತಿರ್ಮಾನಿಸಲಾಗಿದೆ.

ಬೆಂಗಳೂರು-ಮೈಸೂರು ಇತ್ಯಾದಿ ಹೊರ ಜಿಲ್ಲೆಗಳಿಂದ ಉಡುಪಿಗೆ ಬರುವವರು ಅಥವಾ ಹೋಗುವವರು, ಅಂದು ಅನಿವಾರ್ಯವಾಗಿ ಬಸ್ಸು ವಾಹನಗಳ ವ್ಯವಸ್ಥೆ ಸ್ಥಗಿತಗೊಳ್ಳುವುದರಿಂದ ತಮ್ಮ ಪ್ರಯಾಣ ಸ್ಥಗಿತಗೊಳಿಸಬೇಕು ಎಂದು ಸಮಿತಿಯ ಮುಖಂಡರು ಮನವಿ ಮಾಡಿದ್ದಾರೆ.
ಮತ್ತಷ್ಟು
ಪಕ್ಷಗಳ ಅಧಿಕಾರ ದಾಹ ರಾಷ್ಟ್ರಪತಿ ಅಡಳಿತಕ್ಕೆ ನಾಂದಿ
ಸ್ಥಳೀಯ ಸಂಸ್ಥೆಗಳಿಗೆ ದಕ್ಕದ ಜನಪ್ರತಿನಿಧಿಗಳ ಆಡಳಿತ
ರಾಜ್ಯಪಾಲರಿಂದ ಜನತಾ ದರ್ಶನ ವಿಕೇಂದ್ರೀಕರಣ
ಚುನಾವಣೆ ಅನಿವಾರ್ಯ: ಯಡಿಯೂರಪ್ಪ
ಮೈತ್ರಿ ಸರಕಾರ ರಚನೆ ಇಲ್ಲ-ದೇವೇಗೌಡ
ಸರ್ಕಾರ ರಚನೆಗೆ ಜೆಡಿಎಸ್ ಕಸರತ್ತು