ಮಧ್ಯಂತರ ಚುನಾವಣೆಗೆ ಸಿದ್ದ ಎಂದು ಜೆಡಿಯಸ್ ವರಿಷ್ಠ ಎಚ್.ಡಿ. ದೇವೇಗೌಡರಿಂದ ಘೋಷಣೆ ನಡೆದಿರುವ ಬೆನ್ನಲ್ಲೇ ಪಕ್ಷದ ಇನ್ನೋರ್ವ ನಾಯಕ ಎಂ.ಪಿ.ಪ್ರಕಾಶ್ ಪರ್ಯಾಯ ಸರ್ಕಾರ ರಚನೆಗೆ ಚಿಂತನೆ ನಡೆಸಿದ್ದಾರೆ.
ಆದರೆ ಇದೀಗ ಅವರ ಲೆಕ್ಕಾಚಾರ ಮತ್ತೊಂದು ಸರ್ಕಾರ ರಚಿಸಲು ಇರುವ ಸಂಖ್ಯಾಬಲದತ್ತ ಹರಿದಿದೆ.
ಆದರೆ ದೇವೇಗೌಡರು ಸರರ್ಕಾರ ರಚನೆಗೆ ಸಿದ್ದರಿಲ್ಲ. ಪಕ್ಷದ ಅನೇಕ ಶಾಸಕರಿಗೆ ಚುನಾವಣೆ ಬೇಕಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ.
ದೇವೇಗೌಡರನ್ನು ರಾಜಕೀಯವಾಗಿ ತೊರೆದು ಸರ್ಕಾರ ರಚಿಸಲು ಬಹುತೇಕ ಶಾಸಕರು ಹಿಂದೇಟು ಹಾಕುತ್ತಿರುವುದು ಸರ್ಕಾರ ರಚನೆ ಪ್ರಕ್ರಿಯೆಗೆ ತೊಡಕಾಗಿದೆ. ದೇವೇಗೌಡರ ಮುನಿಸಿಗೆ ಗುರಿಯಾಗಬೇಕಾದೀತು ಎಂಬ ಚಿಂತೆ ಪ್ರಕಾಶ್ ಬೆಂಬಲಿಗರಿಗೆ ಕಾಡುತ್ತಿದೆ.
ಈ ಮಧ್ಯ ಪ್ರಕಾಶ್ ಇಂದು ದೆಹಲಿಯಲ್ಲಿ ಕಾಂಗ್ರೇಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲರ ಜತೆ ಸರ್ಕಾರ ರಚನೆ ಕುರಿತು ಎರಡನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ ಎಂಬುದು ಗೌಡರ ಪಾಳಯವನ್ನು ಕಂಗೆಡಿಸಿದೆ.
ಪ್ರಕಾಶ್ ಬೆಂಬಲಕ್ಕೆ ಅನೇಕ ಪಕ್ಷೇತರ ಶಾಸಕರು ಗಟ್ಟಿಯಾಗಿ ನಿಂತಿದ್ದಾರೆ. ಕನ್ನಡ ಚಳವಳಿ ವಾಟಾಳ್ ನಾಗರಾಜ್,ಬ್ರಹ್ಮಾವರದ ಶಾಸಕ ಜಯಪ್ರಕಾಶ ಹೆಗ್ಡೆ,ಆರ್ ಪಿ ಐನ ರಾಜೇಂದ್ರನ್ ಗುರುವಾರ ಪ್ರಕಾಶ್ ಜತೆ ಸಮಾಲೋಚನೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
|