ಏಷ್ಯಾದ ಹೆಬ್ಬಾಗಿಲು ಎಂಬ ಧ್ಯೇಯ ಘೋಷದೊಂದಿಗೆ 10ನೇ ಬೆಂಗಳೂರು ಐಟಿ ಡಾಟ್ ಇನ್ 2007 ಮಾಹಿತಿ ತಂತ್ರಜ್ಞಾನ ಮಹಾಮೇಳ ಈ ತಿಂಗಳ 29 ರಿಂದ ಬೆಂಗಳೂರಿನಲ್ಲಿ ನಡೆಯಲಿದೆ. ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ತ್ರೀಯ ಪ್ರದರ್ಶನ ಕೇಂದ್ರದಲ್ಲಿ 29 ರಿಂದ ನ.1 ರ ವರೆಗೆ ನಡೆಯುವ ಮಾಹಿತಿ ತಂತ್ರಜ್ಞಾನ ಮೇಳವನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಉದ್ಘಾಟಿಸಲಿದ್ದಾರೆ.
ಅಂತಾರಾಷ್ಟ್ತ್ರೀಯ ಖ್ಯಾತಿ ಪಡೆದ ಜರ್ಮನಿ, ಆಸ್ಟ್ತ್ರೇಲಿಯಾ, ಕೆನಡ, ಚೀನಾ, ಶ್ರೀಲಂಕಾ, ರಷ್ಯಾ, ಬ್ರಿಟನ್, ಜಪಾನ್, ಕೊರಿಯಾ ಸೇರಿದಂತೆ ಸುಮಾರು 200 ರಾಷ್ಟ್ತ್ರಗಳ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಲಿವೆ.
ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ದೂರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಎ. ರಾಜಾ ಭಾಗವಹಿಸಲಿದ್ದಾರೆ.
ಐಟಿ ಮೇಳದ ಅಂಗವಾಗಿ ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ರಾಜ್ಯದ ಆರು ಜಿಲ್ಲೆಗಳಲ್ಲಿ ಎಂಜಿನಿಯರ್ ಪದವೀಧರರಿಗೆ ಕೌಶಲ್ಯ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತಿದೆ.
ಮೆರಿಟ್ ಟ್ರ್ಯಾಕ್ ಸಂಸ್ಥೆಯು ಸಹಯೋಗದಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆ ಕೌಶಲ್ಯ ಸಾಮರ್ಥ್ಯ ಪರೀಕ್ಷೆಗೆ ಅಕ್ಟೋಬರ್ 29ರಿಂದ ನೋಂದಣಿ ಆರಂಭಿಸಲಾಗುತ್ತದೆ. ನವೆಂಬರ್ ಕಡೇ ವಾರದಲ್ಲಿ ಅಂತಿಮ ಪರೀಕ್ಷೆ ನಡೆಯಲಿದೆ.
|