ರಾಜಕೀಯ ವಿಶ್ಲೇಷಕರೂ ಜೀರ್ಣಿಸಿಕೊಳ್ಳಲು ಸಾಧ್ಯವಾಗದಂಥ ರಾಜಕೀಯ ಬೆಳವಣಿಗೆಗಳು ಶನಿವಾರ ನಡೆದಿವೆ.
ತಮ್ಮ ಹಾಗೂ ತಮ್ಮ ತಂದ ಮಾತುಗಳಿಗೆ ಸೊಪ್ಪು ಹಾಕದೆ ದೆಹಲಿಗೆ ತೆರಳಿ ಕಾಂಗ್ರೆಸ್ನೊಂದಿಗೆ ಮಾತುಕತೆ ನಡೆಸಿ ಪಕ್ಷದಲ್ಲಿ ಬಂಡಾಯ ಶಾಸಕರ ಗುಂಪಿನೊಂದಿಗೆ ಸರ್ಕಾರ ರಚನೆಗೆ ಮುಂದಾದ ಪ್ರಕಾಶ್ ಅವರ ಪ್ರಯತ್ನಗಳಿಗೆ ಬೇಕ್ ಹಾಕಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸ ತಂತ್ರ ಹೂಡಿದ್ದಾರೆ.
ಶತಾಯ ಗತಾಯ ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಅವರು ತಮ್ಮ ಬೆಂಬಲಕ್ಕಿರುವ 30 ಶಾಸಕರೊಂದಿಗೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಅತಿಥಿ ಗೃಹದಲ್ಲಿ ಸಭೆ ನಡೆಸಿದ್ದಾರೆ.
ಬಿಜೆಪಿಗೆ ಬೆಂಬಲ ನೀಡಿ ಆ ಪಕ್ಷದ ನೇತೃತ್ವದಲ್ಲಿ ಸರ್ಕಾರ ರಚನೆ ಅವರ ಚರ್ಚೆಯ ವಿಷಯ. ಈ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದೊಂದಿಗೆ ಶನಿವಾರ ಸಂಜೆ ಜೆಡಿಎಸ್ ಶಾಸಕಾಂಗ ಸಭೆ ನಡೆಯಲಿದೆ.
ಆ ಸಭೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಎರಡು ಪಕ್ಷಗಳ ಮುಖಂಡರು ತಮ್ಮಬೆಂಬಲವನ್ನು ನೀಡುವ ಹಾಗೂ ಸರ್ಕಾರ ರಚನೆಯ ಪತ್ರಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಿದ್ದಾರೆ.
ಈಗಾಗಲೇ ಕುಮಾರಕೃಪದಲ್ಲಿ ಬಿಜೆಪಿ ಮುಖಂಡ ವೆಂಕಯ್ಯನಾಯ್ಡು ಅವರನ್ನು ಭೇಟಿಮಾಡಿದ ಕುಮಾರಸ್ವಾಮಿ ಅವರು ಮಾತು ಕತೆ ನಡೆಸಿದ್ದಾರೆ.
|