ಜೆಡಿಎಸ್ ನೊಂದಿಗೆ ಇನ್ನು ಮಾತು ಕತೆ ಇಲ್ಲ, ಚುನಾವಣೆಯೊಂದೇ ಉಳಿದಿರುವ ದಾರಿ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿ ಶನಿವಾರ ತನ್ನ ರಾಗ ಬದಲಾಯಿಸಿದೆ.
ತಾವು ಬೆಂಬಲ ನೀಡುವುದಾಗಿ ಕುಮಾರಸ್ವಾಮಿ ಸಂದೇಶ ರವಾನಿಸಿರುವ ಹಿನ್ನೆಲೆಯಲ್ಲಿ ಕುಮಾರಕೃಪ ಅತಿಥಿ ಗೃಹದಲ್ಲಿ ಬಿಜೆಪಿ ಶಾಸಕರ ಸಭೆ ನಡೆದಿದೆ.
ಆ ಪಕ್ಷದ ರಾಷ್ಟ್ತ್ರೀಯ ಮುಖಂಡ ವೆಂಕಯ್ಯನಾಯ್ಡು ಸಮಕ್ಷಮದಲ್ಲಿ ನಡೆಯುವ ಸಭೆಯ ನಿರ್ಧಾರಗಳನ್ನು ಅವರೇ ಮಧ್ಯಾಹ್ನ ನಡೆಯಲಿರುವ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಲಿದ್ದಾರೆ.
ಬಿಜೆಪಿ ಶಾಸಕಾಂಗ ಸಭೆ ನಡೆದು ಶನಿವಾರ ಸಂಜೆ ರಾಜಭವನಕ್ಕೆ ತೆರಳಿ ಜೆಡಿಎಸ್ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಲಿದ್ದಾರೆ.
ತಮ್ಮ ಕ್ಷೇತ್ರಗಳಿಗೆ ತೆರಳಿರುವ ಶಾಸಕರಿಗೆಲ್ಲರನ್ನು ಕೂಡಲೇ ಬೆಂಗಳೂರಿಗೆ ದೌಡಾಯಿಸುವಂತೆ ಆದೇಶ ನೀಡಲಾಗಿದೆ.
ಈ ಬೆಳವಣೆಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಸದಾನಂದಗೌಡ ಅವರು ಚುನಾವಣೆಗೆ ಹೋಗಲು ತಮ್ಮ ಪಕ್ಷ ನಿರ್ಧರಿಸಿತ್ತು. ಆದರೆ ಕೆಲ ಶಾಸಕರು ಚುನಾವಣೆ ಎದುರಿಸಲು ಸಿದ್ಧರಿಲ್ಲದ ಕಾರಣ ಈ ಬದಲಾವಣೆ ಅನಿವಾರ್ಯ ಎಂದು ಹೇಳಿದ್ದಾರೆ.
ಈ ಪ್ರಯತ್ನಗಳು ಒಂದು ವಾರದಿಂದ ತೆರಮರೆಯಲ್ಲೇ ನಡೆಯುತ್ತಿತ್ತು ಎಂದು ಹೇಳಲಾಗಿದೆ.
|