ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕಾಂಗ್ರೆಸ್ ಪಾಳಯದಲ್ಲಿ ಅಯೋಮಯ
ಶನಿವಾರದ ರಾಜ್ಯ ರಾಜಕಾರಣದಲ್ಲಿ ಉಂಟಾದ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಆಶ್ಚರ್ಯಕ್ಕೆ ಒಳಗಾಗಿದೆ.

ಕ್ಷಣಕ್ಕೊಂದು ಬೆಳವಣಿಗೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಏನು ಮಾಡಬೇಕು ಎಂಬುದೇ ಕಾಂಗ್ರೆಸಿಗರಿಗೆ ತೋಚದಂತಾಗಿದೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ತ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಅವರು ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿದ್ದಾರೆ.

ದೇವೇಗೌಡರ ಕುಟುಂಬದ ಬದ್ಧ ವಿರೋಧಿಯಾಗಿ ಪರಿವರ್ತನೆಯಾಗಿರುವ ಸಿದ್ದರಾಮಯ್ಯ ಅವರನ್ನು ಬಂಡಾಯ ಶಾಸಕರೊಂದಿಗೆ ಕಾಂಗ್ರೆಸ್ನೊಂದಿಗೆ ಮೈತ್ರಿಗೆ ಮುಂದಾದ ಎಂ.ಪಿ.ಪ್ರಕಾಶ್ ಅವರು ದೆಹಲಿಗೆ ತೆರಳುವ ಮುನ್ನ ಭೇಟಿ ಯಾದದ್ದೇ ಇದಕ್ಕೆ ಕಾರಣ ಹೇಳಲಾಗುತ್ತಿದೆ.

ಕೆಂಡಾಮಂಡಲವಾದ ಕುಮಾರಸ್ವಾಮಿ ತಮ್ಮ ಬೆಂಬಲಿಗರಾದ ಶಾಸಕರೊಂದಿಗೆ ಬಿಜೆಪಿ ಜತೆ ಸೇರಿ ಸರ್ಕಾರ ರಚನೆಗೆ ಮುಂದಾದರು ಎಂದು ಅವರ ಆಪ್ತ ವಲಯಗಳು ತಿಳಿಸಿವೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ನಲ್ಲಿರುವ ಜೆಡಿಎಸ್ ವಿರೋಧಿ ಬಣವಾದ ಧರಂಸಿಂಗ್ ಬಣ ಈ ಬೆಳವಣಿಗೆಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದೆ.

ಧರಂಸಿಂಗ್ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಬೇಟಿ ಮಾಡಿದ್ದರೂ ಯಾವ ವಿಷಯದ ಬಗ್ಗೆ ಚರ್ಚಿಸಿದರು ಎಂದು ತಿಳಿದುಬಂದಿಲ್ಲ.

ಆದರೆ ಈ ನಡುವೆ ಕೇಂದ್ರದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ ವಿಧಾನಸಭೆಯನ್ನುರದ್ದು ಗೊಳಿಸಿದರೆ ಗತಿ ಏನು ಎಂಬ ಚಿಂತೆ ಬಿಜೆಪಿ ಶಾಸಕರನ್ನು ಕಾಡುತ್ತಿದೆ.
ಮತ್ತಷ್ಟು
ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ
ಉಲ್ಟಾ ಪಲ್ಟಾ: ಎಚ್.ಡಿ.ಕೆ. ಹೊಸ ತಂತ್ರ
ಬಿಜೆಪಿ ಬೆಂಬಲಕ್ಕೆ ಜೆಡಿಎಸ್: ಯಡ್ಡಿಗೆ ಸಿಎಂ ಸ್ಥಾನ
ಚೆನ್ನಮ್ಮಳ ನೈಜ ಇತಿಹಾಸ ಜನರಿಗೆ ತಲುಪಲಿ: ಕಲ್ಬುರ್ಗಿ
ಬಂಗಾರಪ್ಪಗೆ ಹುಟ್ಟು ಹಬ್ಬದ ಸಂಭ್ರಮ
ಬೆಂಗಳೂರು ಐಟಿ ಡಾಟ್ ಇನ್ 2007