ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಜಾನಪದ ಜಾತ್ರೆ ಪುನಾರಂಭ
ಸುವರ್ಣ ಕರ್ನಾಟಕ ವರ್ಷಾಚರಣೆ ಹಿನ್ನೆಲೆಯಲ್ಲಿ ಆರಂಭಗೊಂಡ ವಿಶಿಷ್ಟ ಕಾರ್ಯಕ್ರಮ ಜನಪದ ಜಾತ್ರೆ ಮತ್ತೆ ಆರಂಭಗೊಂಡಿದೆ.

ಜನಮನ ಸೂರೆಗೊಂಡಿದ್ದ ಜಾನಪದ ಜಾತ್ರೆಯನ್ನು ಮಳೆಗಾಲದ ಕಾರಣದಿಂದ ನಿಲ್ಲಿಸಲಾಗಿತ್ತು. ಈಗ ಮತ್ತೆ ಲಾಲ್‌ಬಾಗ್‌ನಲ್ಲಿ ಈ ಕಾರ್ಯಕ್ರಮ ಆರಂಭಗೊಂಡಿದೆ.

ಈ ತಿಂಗಳ 27 ಹಾಗೂ 28ರಂದು ಸಂಜೆ ಆರು ಗಂಟೆಯಿಂದ ಎಂಟು ಗಂಟೆ ವರೆಗೆ ಲಾಲ್‌ಬಾಗ್‌ನಲ್ಲಿ ಈ ಜಾತ್ರೆ ನಡೆಯಲಿದೆ.

ಕಾರ್ಯಕ್ರಮವನ್ನು ಶನಿವಾರ ಜನಪದ ತಜ್ಞ ಹಾಗೂ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಉದ್ಘಾಟಿಸಿಲಿದ್ದು, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಜಿ.ನಾರಾಯಣ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸುಗ್ಗಿ ಕುಣಿತ, ತಮಟೆ ವಾದನ, ವೀರಗಾಸೆ, ಚಿಟ್ಮೇಳ, ಪೂಜಾಪಟ ಕುಣಿತ, ಪೂಜಾ ಕುಣಿತ, ಕಣಿವಾದನ, ಹೂವಿನ ಕುಣಿತ, ಕೋಲಾಟ, ಗೊರವ ಕುಣಿತ, ಪಟ ಕುಣಿತ, ಕಂಗೀಲು ಕುಣಿತಗಳು ಇರಲಿವೆ.

ಉತ್ತರ ಕನ್ನಡೆ, ಮಂಡ್ಯ, ಚಿಕ್ಕಮಗಳೂರು, ಮೈಸೂರು, ರಾಯಚೂರು, ಬಾಗಲಕೋಟೆ, ತುಮಕೂರು, ಚಾಮರಾಜನಗರ, ಬೆಂಗಳೂರು ಜಿಲ್ಲೆಗಳ ಜನಪದ ಕಲಾ ತಂಡಗಳು ಭಾಗವಹಿಸಲಿವೆ ಎಂದು ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆಯ ಸುವರ್ಣ ಕರ್ನಾಟಕ ವಿಶೇಷ ಘಟಕದ ಪ್ರಕಟಣೆ ತಿಳಿಸಿದೆ.
ಮತ್ತಷ್ಟು
ಪಿಯು ಆಂತರಿಕ ಮೌಲ್ಯಾಂಕ ರದ್ದು
ಕಾಂಗ್ರೆಸ್ ಪಾಳಯದಲ್ಲಿ ಅಯೋಮಯ
ಬಿಜೆಪಿ ಪಾಳಯದಲ್ಲಿ ಬಿರುಸಿನ ಚಟುವಟಿಕೆ
ಉಲ್ಟಾ ಪಲ್ಟಾ: ಎಚ್.ಡಿ.ಕೆ. ಹೊಸ ತಂತ್ರ
ಬಿಜೆಪಿ ಬೆಂಬಲಕ್ಕೆ ಜೆಡಿಎಸ್: ಯಡ್ಡಿಗೆ ಸಿಎಂ ಸ್ಥಾನ
ಚೆನ್ನಮ್ಮಳ ನೈಜ ಇತಿಹಾಸ ಜನರಿಗೆ ತಲುಪಲಿ: ಕಲ್ಬುರ್ಗಿ