ರಾಜ್ಯದಲ್ಲಿ ರಾಷ್ಟ್ತ್ರಪತಿ ಆಡಳಿತ ಜಾರಿಗೆ ಬಂದು ಆಗಲೇ ಮೂರು ವಾರ ಕಳೆಯಿತು. ಆಡಳಿತ ಸುಗಮವಾಗಿ ಸಾಗಲು ಆಡಳಿತ ಹೊಣೆಹೊತ್ತ ರಾಜ್ಯಪಾಲರಿಗೆ ಸಲಹೆ ನೀಡಲು ಸಲಹೆಗಾರರ ಮಂಡಳಿಯನ್ನು ಕೇಂದ್ರ ಸರ್ಕಾರ ನೇಮಕ ಮಾಡಬೇಕಾಗಿತ್ತು. ಆದರೆ ಈ ವರೆಗೆ ಅದು ಆಗಲಿಲ್ಲ.
ಇತ್ತೀಚೆಗೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ದೆಹಲಿಗೆ ಹೋಗಿದ್ದಾಗ ಅಲ್ಲಿ ಈ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸಲಹೆಗಾರರು ಅಥವಾ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ನೇಮಕವಾಗಬಹುದಾದವರ ಕೆಲ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಹೆಸರುಗಳು ಕೇಳಿ ಬರತ್ತಿವೆ.
ರಾಜ್ಯಪಾಲರ ನೇತೃತ್ವದ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಲು ನಾಲ್ವರು ಹಿರಿಯ ಅಧಿಕಾರಿಗಳು ನೇಮಕಗೊಳ್ಳುತ್ತಾರೆ.
ನಿವೃತ್ತಗೊಂಡಿರುವ ಅಧಿಕಾರಿಗಳನ್ನು ಸಹಾ ನೇಮಕ ಮಾಡುವ ಸಾಧ್ಯತೆ ಇದೆ. ಅಂಥವರ ಹೆಸರುಗಳಲ್ಲಿ ಎಂ.ಬಿ. ಪ್ರಕಾಶ್, ಚಿರಂಜೀವಿ ಸಿಂಗ್ ಹಾಗೂ ಥೆರೆಸಾ ಭಟ್ಟಾಚಾರ್ಯರ ಹೆಸರು ಕೇಳಿಬರುತ್ತಿದೆ.
ಇಂಥ ಮಹತ್ವದ ಹುದ್ದೆ ಪಡೆಯಲು ಅಧಿಕಾರಿಗಳಲ್ಲಿ ಪೈಪೋಟಿ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.
ಆದರೆ ಸಲಹೆಗಾರರ ನೇಮಕದ ವಿಚಾರದಲ್ಲಿ ದೆಹಲಿ ದೊರೆಗಳ ನಿರ್ಧಾರವೇ ಅಂತಿಮ ಎಂಬುದು ಖಚಿತ.
|