ಸರ್ಕಾರ ರಚನೆಗೆ ಬಿಜೆಪಿಗೆ ಜೆಡಿಎಸ್ ಬೇಷರತ್ ಬೆಂಬಲ ನೀಡುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಿದ್ದರೂ ಉಭಯ ಪಕ್ಷಗಳಲ್ಲೂ ಇನ್ನೂ ಅನುಮಾನ ಕಾಡುತ್ತಿದೆ.
ಹಿಂದೆ ನೀಡಿರುವ ಪತ್ರಗಳ ಅನುಸಾರ ತಾಂತ್ರಿಕ ಕಾರಣಗಳನ್ನು ಒಡ್ಡಿ ಸರ್ಕಾರ ರಚನೆಗೆ ಅಡ್ಡಿಯಾಗಿದ್ದೆ ಆದರೆ ಮುಂದಿನ ಕ್ರಮ ಏನು ಎಂಬ ಬಗ್ಗೆ ಚರ್ಚಿಸಲು ಬಿಜೆಪಿ ಭಾನುವಾರ ಸಭೆ ನಡೆಸಿದೆ. ಎಲ್ಲ ಶಾಸಕರು ಪ್ರತ್ಯೇಕವಾಗಿ ಬೆಂಬಲ ಪತ್ರಗಳು ನೀಡಬೇಕು ಎಂಬ ರಾಜ್ಯಪಾಲರ ಆದೇಶದ ಬಗ್ಗೆ ಬಿಜೆಪಿ ಮುಖಂಡ ವೆಂಕಯ್ಯನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಗತ್ಯವಿದ್ದರೆ ತಮ್ಮ ಪಕ್ಷದ ಹಾಗೂ ಜೆಡಿಎಸ್ ಶಾಸಕರನ್ನು ರಾಜ್ಯಪಾಲರ ಬಳಿ ಕೊಂಡೊಯ್ಯುವುದಾಗಿ ಅವರು ತಿಳಿಸಿದ್ದಾರೆ. ಸರ್ಕಾರ ರಚನೆಗೆ ಕಾಂಗ್ರೆಸ್ ಅಡ್ಡಿಯಾಗುವ ಸಂಭವವಿರುವ್ಯದರಿಂದ ಅವರ ಯತ್ನಗಳಿಗೆ ಪ್ರತಿ ತಂತ್ರ ರೂಪಿಸಲು ಬಿಜೆಪಿ ಸಜ್ಜುಗೊಳ್ಳುತ್ತಿದೆ.
ತಮ್ಮ ಪಕ್ಷದ ಎಲ್ಲಾ ಶಾಸಕರನ್ನು ರಾಜ್ಯ ರಾಜಧಾನಿ ಬಿಟ್ಟುಹೋಗದಂತೆ ಸೂಚನೆ ನೀಡಿದೆ.
|