ಬಿಜೆಪಿ ಜತೆಗೂಡಿ ಸರ್ಕಾರ ರಚಿಸಿದಾಗಲೂ, ಸಮ್ಮಿಶ್ರ ಸರ್ಕಾರ ಪತನಗೊಂಡಾಗರೆಸಾರ್ಟ್ ರಾಜಕೀಯಕ್ಕೆ ಜೋತುಬಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ರೆಸಾರ್ಟ್ ರಾಜಕೀಯಕ್ಕೆ ಇಳಿದಿದ್ದಾರೆ.
ತಮ್ಮಪಕ್ಷದ ಹಿರಿಯ ಮುಖಂಡ ಎಂ.ಪ್ರಕಾಶ್ ಅವರು ಕಾಂಗ್ರೆಸ್ ಮುಖಂಡರ ಸಖ್ಯ ಬೆಳೆಸಿರುವುದರಿಂದ ಈ ಕ್ರಮಕ್ಕೆ ಮುಂದಾಗಿದ್ದಾರೆ. ತಮ್ಮ ಪಾಳಯ ಶಾಸಕರನ್ನು ಕುದುರೆ ವ್ಯಾಪಾರ ಮಾಡಿ ಕಾಂಗ್ರೆಸ್‌ನವರು ಕೊಂಡುಕೊಳ್ಳಬಹುದು ಎಂಬ ಭೀತಿ ಕುಮಾರಸ್ವಾಮಿಗೆ ಎದುರಾಗಿದೆ. ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿರುವುದರಿಂದ ಎಲ್ಲಾ ಶಾಸಕರೂ ಒಂದೆಡೆ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸುವುದು ಸೂಕ್ತ ಎಂಬ ತಮ್ಮ ಅಭಿಪ್ರಾಯವಾಗಿದೆ, ಹಾಗಾಗಿ ರೆಸಾರ್ಟ್ಗೆ ತೆರಳಿರುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಬಿಜೆಪಿಗೆ ಬೇಷರತ್ ಬೆಂಬಲ ನೀಡುವುದಾಗಿ ಜೆಡಿಎಸ್ ರಾಜ್ಯಪಾಲರಿಗೆ ನೀಡಿರುವ ಪತ್ರಕ್ಕೆ ಎಂ.ಪಿ.ಪ್ರಕಾಶ ಸಹಿ ಮಾಡದಿರುವುದು ಕುಮಾರಸ್ವಾಮಿ ಅವರಿಗೆ ತಲೆ ನೋವಾಗಿ ಪರಿಣಮಿಸಿದೆ.
ಮುಂದಿನ ಕಾರ್ಯಕ್ರಮಗಳ ರೂಪು ರೇಷೆಗಳನ್ನು ರೂಪಿಸಲು ದೊಡ್ಡ ಬಳ್ಳಾಪುರದ ಬಳಿ ಇರುವ ರಮಣಶ್ರೀ ರೆಸಾರ್ಟ್‌ನಲ್ಲಿ ಕುಮಾರಸ್ವಾಮಿ ಶಾಸಕರೊಂದಿಗೆ ಬೀಡುಬಿಟ್ಟಿದ್ದಾರೆ.
|