ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಯಡಿಯೂರಪ್ಪ ಇನ್ನು ಮುಂದೆ ಯಡ್ಯೂರಪ್ಪ
ಹೆಸರಿನಲ್ಲೇನಿದೆ ಎನ್ನುತ್ತಾರೆ ಕೆಲವರು. ಹೆಸರಿನಲ್ಲೇ ಎಲ್ಲಾ ಇದೆ ಎನ್ನುತ್ತಾರೆ ಉಳಿದವರು. ಮುಖ್ಯಮಂತ್ರಿ ಗಾದಿ ತಮಗೆ ದೊರೆಯದಿರುವುದಕ್ಕೆ ತಮ್ಮ ಹೆಸರೇ ಕಾರಣ ಎಂದು ಯಾರು ಹೇಳಿದರೋ ಗೊತ್ತಿಲ್ಲ.

ಆದರೆ ಯಡಿಯೂರಪ್ಪ ಎಂಬ ತಮ್ಮ ಹೆಸರನ್ನು ಯಡ್ಯೂರಪ್ಪ ಎಂದು ಬದಲಾಯಿಸಿಕೊಂಡಿದ್ದೇ ತಡ ಅವರಿಗೆ ಅದೃಷ್ಷ ಖುಲಾಯಿಸಿದೆ. ಇನ್ನೇನು ಸದ್ಯದಲ್ಲೇ ಅವರು ರಾಜ್ಯದ ಮುಖ್ಯಮಂತ್ರಿ ಯಾಗಲಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಇನ್ನುಮುಂದೆ ಬಿ.ಎಸ್. ಯಡ್ಯೂರಪ್ಪ.

ಬಿ.ಎಸ್. ಯಡಿಯೂರಪ್ಪ ಎಂದಿದ್ದ ತಮ್ಮ ಹೆಸರನ್ನು ಅ. 11ರಂದು ಪ್ರಮಾಣಪತ್ರದ ಮೂಲಕ ಬಿ.ಎಸ್. ಯಡ್ಯೂರಪ್ಪ ಎಂದು ಬದಲಿಸಿಕೊಂಡಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆ ತಿಳಿಸಿದೆ. ಸಾರ್ವಜನಿಕರು ಅವರನ್ನು ಸಂಪರ್ಕಿಸುವಾಗ ಈ ಹೊಸ ಅಧಿಕೃತ ನಾಮಧೇಯವನ್ನೇ ಬಳಸುವಂತೆ ಮನವಿ ಮಾಡಲಾಗಿದೆ.

ನಾಮಧೇಯ ಬದಲಿಸಿಕೊಂಡಿದ್ದರ ಫಲವೋ ಎಂಬಂತೆ ಎರಡು ವಾರಗಳಲ್ಲೆ ಯಡ್ಯೂರಪ್ಪ ಮುಖ್ಯಮಂತ್ರಿಯಾಗುವ ಯೋಗ ಪಡೆದಿರುವುದು ಯೋಗಾಯೋಗವಷ್ಟೆ.
ಮತ್ತಷ್ಟು
ಮತ್ತೆ ಕುಮಾರಸ್ವಾಮಿ ರೆಸಾರ್ಟ್ ರಾಜಕೀಯ
ಬಿಜೆಪಿ ಉನ್ನತ ಮಟ್ಟದ ಸಭೆ
ವಿಧಾನಸಭೆ ವಿಸರ್ಜಿಸಲು ಕಾಂಗ್ರೆಸ್ ತಂತ್ರ
ಮೈತ್ರಿ ವಿರುದ್ಧ ಎಂ.ಪಿ.ಪ್ರಕಾಶ್ ಬಂಡಾಯ
ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ
ಸರ್ಕಾರ ರಚನೆಗೆ ಬಿಜೆಪಿ ಕೋರಿಕೆ