ಸುಮಾರು ಒಂದುವರೆ ದಶಕದಿಂದ ವನ್ಯಸಂಪತ್ತಿನ ಉಳಿವು, ಸಂವರ್ಧನೆಯನ್ನೇ ಧರ್ಮಕಾರ್ಯವನ್ನಾಗಿಸಿಕೊಂಡು ಅವಿರತವಾಗಿ ಹೋರಾಡುತ್ತಿರುವ ಸ್ವರ್ಣವಲ್ಲಿ ಮಹಾಸಂಸ್ಥಾನಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಶ್ರೀಮದ್ ಭಗವದ್ಗೀತಾ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ.
ಪರಿಸರದ ಹಸಿರಗಷ್ಟೇ ಪ್ರಾಧಾನ್ಯ ನೀಡದೆ ಸಕಲ ಜನಾಂಗದವರ ಮನದೊಳಗಣ ಪರಿಸರವನ್ನೂ ಶುದ್ದಿಗೊಳಿಸುವ ಕೆಲಸವನ್ನೂ ಸ್ವರ್ಣವಲ್ಲಿ ಶ್ರೀಗಳು ಮಾಡಲು ಮುಂದಾಗಿದ್ದಾರೆ.
ಈ ಮೂಲಕ ಸಮಾಜದ ಆಂತರಿಕ ಕಲ್ಯಾಣವನ್ನು ಮಾಡಬೇಕೆಂಬವ ಕೈಂಕರ್ಯಕ್ಕೆ ದೀಕ್ಷೆ ತೊಟ್ಟಿದ್ದಾರೆ.
ಭಾನುವಾರದಿಂದ ಆರಂಭವಾದ ಈ ಅಭಿಯಾನದ ಸಂದರ್ಭದಲ್ಲಿ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ನಗರ, ಪಟ್ಟಣ ಹಾಗೂ ಹಳ್ಳಿಗಳಲ್ಲಿರುವ ಎಲ್ಲರಿಗೂ ಭಗವದ್ಗೀತೆಯ ಪಠ್ಯ ತಲುಪಿಸುವುದು, 5ರಿಂದ 7 ನೇತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಗೀತೆಯ 14ನೇ ಅಧ್ಯಾಯ, ಪ್ರೌಢಶಾಲಾ ಮಕ್ಕಳಿಗೆ 15ನೇ ಅಧ್ಯಾಯನವನ್ನು ಕಂಠಪಾಠ ಮಾಡಿಸುವುದು, ವಿದ್ಯಾರ್ಥಿಗಳಿಗಾಗಿ ಅಲ್ಲಲ್ಲಿ ಗೀತಾ ಕಂಠಪಾಠ ಸ್ಪರ್ಧೆ ಆಯೋಜಿಸುವುದು ಮತ್ತು ಬಹುಮಾನ ನೀಡುವುದು, ನಾಡಿನ ಮಾತೆಯರಿಗೆ ಸಾಮೂಹಿಕ ಗೀತಾ ಪಠಣ ಮಾಡಿಸುವುದು ಅಭಿಯಾನದ ಉದ್ದೇಶ.
|