ಕಳೆದ ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ನಡೆಸುವ ಉತ್ಸುಕತೆ ತೋರಿಸಿದ್ದ ಎಂ.ಪಿ. ಪ್ರಕಾಶ್ ನಿನ್ನೆ ನಡೆದ ರಾಜಕೀಯ ಪರಿಸ್ಥಿತಿಯಿಂದಾಗಿ ರಾಜಕೀಯ ಹಿನ್ನಡೆ ಪಡೆದಿದ್ದು, ಪ್ರಕಾಶ್ ಮುಂದಿನ ಹಾದಿ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಪ್ರಕಾಶ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಅನಂತರ ಬಿಜೆಪಿಗೆ ಬೆಂಬಲ ನೀಡುವ ನಿರ್ಧಾರ ಕೈಗೊಂಡ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಧೋರಣೆಯನ್ನು ಪ್ರತಿ ಭಟಿಸಿ ಜೆಡಿಎಸ್ ಶಾಸಕರೊಬ್ಬರು ಪಕ್ಷದ ಸಭೆಯಿಂದು ಹೊರಬಂದ ಘಟನೆ ನಡೆದಿದೆ.
ಕುಮಾರ ಸ್ವಾಮಿ ಕರೆದಿಶಾಸಕರ ಸಭೆಯಲ್ಲಿ ಪಾಲ್ಗೊಂಡಿದ್ದ ಗುಲ್ಬರ್ಗ ಜಿಲ್ಲೆ ಚಿತ್ತಾಪುರದ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ್ ಹೀಗೆ ಪ್ರತಿಭಟಿಸಿ ಹೊರಬಂದಿದ್ದು ಪ್ರಕಾಶ್ ಬಣದಲ್ಲಿ ಗುರುತಿಸಿ ಕೊಂಡಿದ್ದಾರೆ.
ಈ ನಡುವೆ ಇಂದು ಕೆಲ ಪಕ್ಷೇತರ ಶಾಸಕರು ಎಂಪಿ ಪ್ರಕಾಶ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ. ಪ್ರಕಾಶ್ ತಮ್ಮ ಮುಂದಿನ ರಾಜಕೀಯ ಹಾದಿಯ ಬಗ್ಗೆ ಅವರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.
|