ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿರುವ ನಾಟಕದಂತೆ ಗೋಚರಿಸುತ್ತಿರುವ ರಾಜಕೀಯ ಬೆಳವಣಿಗಳೊಂದಿಗೆ, ಮತ್ತೊಮ್ಮೆ ಒಂದಾಗಿ ಹೊಸ ಸರಕಾರ ರಚಿಸಲು ಸಿದ್ಧವಾಗುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಜಂಟಿ ಶಾಸಕಾಂಗ ಸಭೆ ಇಂದು ಬೆಂಗಳೂರಿನಲ್ಲಿ ನಡೆಯಲಿದೆ.
ಈ ಸಭೆಯಲ್ಲಿ ಪರಿಸ್ಥಿತಿಯನ್ನು ಪರಾಮರ್ಶಿಸಿದ ಬಳಿಕ, ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರೆದುರು ಉಭಯ ಪಕ್ಷಗಳ ಶಾಸಕರ ಶಕ್ತಿಪ್ರದರ್ಶನ ನಡೆಯಲಿದೆ.
ಹೊಸ ಸರಕಾರ ರಚಿಸಲು ಹಕ್ಕು ಮಂಡಿಸಿರುವ ಬಿಜೆಪಿಯ ಬಿ.ಎಸ್.ಯಡ್ಯೂರಪ್ಪ ಅವರು ಈ ಶಾಸಕರ ನಿಯೋಗದ ನೇತೃತ್ವ ವಹಿಸಿ ರಾಜ್ಯಪಾಲರಿಗೆ ಮನದಟ್ಟು ಮಾಡಲಿದ್ದಾರೆ.
ಜೆಡಿಎಸ್ ಆಗಲೀ, ಬಿಜೆಪಿಯಾಗಲೀ, ಒಗ್ಗಟ್ಟಿನಲ್ಲಿದೆ ಎಂಬುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಎರಡೂ ಪಕ್ಷಗಳ ಶಾಸಕರು ವ್ಯಕ್ತಿಗತವಾಗಿ ಪ್ರಮಾಣ ಮಾಡಿದ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಲಿದ್ದಾರೆ.
|