ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಬಂಡಾಯ ಶಾಸಕರ ಜತೆ ಪ್ರಕಾಶ್ ಚರ್ಚೆ
NRB
ಮುರಿದು ಬಿದ್ದ ದಾಂಪತ್ಯಕ್ಕೆ ಬೆಸುಗೆ ಹಾಕುವ ಜೆಡಿಎಸ್- ಬಿಜೆಪಿ ಪ್ರಯತ್ನವನ್ನು ವಿರೋಧಿಸುತ್ತಿರುವ ಬಂಡಾಯ ಜೆಡಿಎಸ್ ನಾಯಕ ಎಂ.ಪಿ. ಪ್ರಕಾಶ್ ತಮಗೆ ಬೆಂಬಲಿಸಿರುವ ಶಾಸಕರ ಜತೆ ತಮ್ಮ ಮುಂದಿನ ಕಾರ್ಯತಂತ್ರ ರೂಪಿಸುವ ಕುರಿತು ಸೋಮವಾರ ವಿಚಾರವಿನಿಮಯ ನಡೆಸಿದರು.

ಜೆಡಿಎಸ್‌ಗೆ ಅವಿಧೇಯತೆಯ ನಿಲುವನ್ನು ಮುಂದುವರಿಸಿರುವ ಪ್ರಕಾಶ್, ರಾಜ್ಯಪಾಲರ ಎದುರು ಜೆಡಿಎಸ್-ಬಿಜೆಪಿಯ ಪ್ರಸಕ್ತ ಸರ್ಕಾರ ರಚನೆ ಪ್ರಯತ್ನದ ಬಗ್ಗೆ ತಮ್ಮ ನಿಲುವನ್ನು ಮಂಡಿಸುವುದಾಗಿ ಹೇಳಿದರು. ಪ್ರಬಲ ಲಿಂಗಾಯತ ಕೋಮಿಗೆ ಸೇರಿದ ಅವರು ಜೆಡಿಎಸ್ ಪಕ್ಷವು ಬಿಜೆಪಿ ಜತೆ ಪುನಃ ಕೈಗೂಡಿಸಿ ಸಮ್ಮಿಶ್ರ ಸರ್ಕಾರ ರಚನೆ ಮಾಡುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ.

ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಘೋಷಣೆಯಾಗಿ ಅನಿಶ್ಚಿತ ಪರಿಸ್ಥಿತಿ ತಲೆದೋರಿದಾಗ ಪ್ರಕಾಶ್ ದೆಹಲಿಗೆ ತೆರಳಿ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದರು. ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸಿದರೆ ವಾಟಾಳ್ ನಾಗರಾಜ್, ಜಯಪ್ರಕಾಶ್ ಹೆಗ್ಡೆ ಮುಂತಾದ ಪಕ್ಷೇತರ ಸದಸ್ಯರು ಪ್ರಕಾಶ್‌ ಅವರಿಗೆ ಬೆನ್ನುಲುಬಾಗಿ ನಿಲ್ಲುವುದಾಗಿ ಘೋಷಿಸಿದ್ದಾರೆ.

ಆದರೆ ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸುವ ಪ್ರಯತ್ನ ಮುಂದುವರಿಸುತ್ತೀರಾ ಎಂದು ಪ್ರಕಾಶ್ ಅವರನ್ನು ಪ್ರಶ್ನಿಸಿದಾಗ ಕಾಂಗ್ರೆಸ್‌ನಿಂದ ಅಂತಹ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಹೇಳಿದರು.
ಮತ್ತಷ್ಟು
ಇಂದು 'ಮಿತ್ರರ' ಸಭೆ, ರಾಜಭವನದಲ್ಲಿ ಬಲಪ್ರದರ್ಶನ
ಹಿರಿಯ ನಾಯಕ ಎಂಪಿ ಪ್ರಕಾಶ್ ಮುಂದಿನ ಹಾದಿ ಏನು ?
ಶ್ರೀಗಳಿಂದ ಶ್ರೀಮದ್ ಭಗವದ್ಗೀತಾ ಅಭಿಯಾನ
ಗಣಿ ರೆಡ್ಡಿ ಬಾಯಿಗೆ ಬೀಗ
ಯಡಿಯೂರಪ್ಪ ಇನ್ನು ಮುಂದೆ ಯಡ್ಯೂರಪ್ಪ
ಮತ್ತೆ ಕುಮಾರಸ್ವಾಮಿ ರೆಸಾರ್ಟ್ ರಾಜಕೀಯ