ಪಾರ್ವತಮ್ಮ ರಾಜ್‌ಕುಮಾರ್, ನಟ ಅನಂತ್‌ನಾಗ್ ಸೇರಿದಂತೆ ಐವತ್ತೊಂದು ಮಂದಿಗೆ 2007ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಸೋಮವಾರ ಪ್ರಕಟಿಸಲಾಗಿದೆ.
ಕನ್ನಡ ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಐ.ಎಂ.ವಿಠಲಮೂರ್ತಿ ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದರು.
ಉಳಿದಂತೆ ಪ್ರಶಸ್ತಿಗೆ ಪಾತ್ರರಾದ ಪ್ರಮುಖರ ವಿವರ ಇಂತಿದೆ:
ಸಾಹಿತ್ಯದಲ್ಲಿ ಸುಮಿತ್ರಾ ಗಾಂಧೀ ಕುಲಕರ್ಣಿ, ಡಾ.ಸಿ.ಎನ್.ರಾಮಚಂದ್ರನ್, ಜಿ.ವಿ.ಚಕ್ರವರ್ತಿ, ಶ್ರೀನಿವಾಸರಾಜು, ಕೆ.ಪಿ.ಪಾಂಡುರಂಗಿ, ರಂಗಭೂಮಿ: ದಾದಾ ಸಾಹೇಬ ಅಮೀನಗಡ, ಸರೋಜಮ್ಮ ಧುತ್ತರಗಿ, ಪತ್ರಿಕೋದ್ಯಮ- ಟಿ.ಜೆ.ಎಸ್. ಜಾರ್ಜ್, ಡಾ.ಸರಜೂ ಕಾಟ್ಕರ್, ಸಂಗೀತ-ಶೇಷಪ್ಪ ಗಬ್ಬೂರು, ಬಸಪ್ಪ ಭಜಂತ್ರಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನೃತ್ಯದಲ್ಲಿ ಮಾಸ್ಟರ್ ವಿಠಲ ಶೆಟ್ಟಿ, ಗೀತಾ ದಾತಾರ್, ಯಕ್ಷಗಾನ ಕ್ಷೇತ್ರದಿಂದ ಶೀನಪ್ಪ ಭಂಡಾರಿ, ಕ್ರೀಡಾ ಕ್ಷೇತ್ರದಿಂದ ಪಂಕಜ್ ಅಡ್ವಾಣಿ, ವಿಜ್ಞಾನದಲ್ಲಿ ಜಿ.ಟಿ.ನಾರಾಯಣ ರಾವ್, ಪರಿಸರ ವಿಭಾಗಕ್ಕೆ ಪತ್ರಕರ್ತ ನಾಗೇಶ ಹೆಗಡೆ, ಶಿಕ್ಷಣದಲ್ಲಿ ಬಲವೀರ ರೆಡ್ಡಿ, ಪತ್ರಿಕೋದ್ಯಮದಲ್ಲಿ ವ್ಯಂಗ್ಯಚಿತ್ರಕಾರ ಪೊನ್ನಪ್ಪ ಹಾಗೂ ಹೊರನಾಡ ಕನ್ನಡಿಗರ ಕ್ಷೇತ್ರದಿಂದ ಎಚ್.ವೈ ರಾಜಗೋಪಾಲ ಅಮೆರಿಕ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ನವೆಂಬರ್ 1ರ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
|