ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯಪಾಲರ ಅಂಕಿತಕ್ಕೆ ಜೆಡಿಎಸ್-ಬಿಜೆಪಿ ನಿರೀಕ್ಷೆ
ತೀವ್ರ ರಾಜಕೀಯದ ಕೇಂದ್ರ ಬಿಂದುವಾಗಿರುವ ಬೆಂಗಳೂರಿನಲ್ಲಿ ದ್ವೇಷ ಮರೆತು ಮತ್ತೆ ಒಂದಾಗಿರುವ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಸರಕಾರ ರಚನೆಗೆ ರಾಜ್ಯಪಾಲರ ಅಂಕಿತಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಒಂದೆಡೆಯಿಂದ ಕಾಂಗ್ರೆಸ್ ಪಕ್ಷವು ವಿಧಾನಸಭೆ ವಿಸರ್ಜನೆಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಮುಂದಿನ ಹೆಜ್ಜೆ ಏನು ಎಂಬುದರ ಕುರಿತು ಎಲ್ಲರ ದೃಷ್ಟಿ ನೆಟ್ಟಿದೆ.

ಇನ್ನೊಂದೆಡೆಯಿಂದ ಜೆಡಿಎಸ್‌ನಲ್ಲಿ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಬಂಡಾಯವೆದ್ದಿರುವುದು ಮಿತ್ರಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ಪ್ರಕಾಶ್ ಅವರು ಇಂದು 12 ಮಂದಿ ಸಹಮನಸ್ಕ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದು, ಬಿಜೆಪಿ-ಜೆಡಿಎಸ್ ಮರುಮೈತ್ರಿ ಅಸಿಂಧು ಎಂದು ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದಾರೆ.

ಈ ಮಧ್ಯೆ, ಬಿಜೆಪಿ-ಜೆಡಿಎಸ್ ಮುಖಂಡರು ಕೂಡ ತಾವು ಸರಕಾರ ರಚಿಸುವುದಾಗಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮತ್ತಷ್ಟು
ರಂಗಭೂಮಿಯ ಪ್ರೇಮಾ ಕಾರಂತ ನಿಧನ
ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಜೆಡಿಎಸ್ ವಿರುದ್ಧ ಬಂಡಾಯದ ಬಿಸಿ
ಬಂಡಾಯ ಶಾಸಕರ ಜತೆ ಪ್ರಕಾಶ್ ಚರ್ಚೆ
ಇಂದು 'ಮಿತ್ರರ' ಸಭೆ, ರಾಜಭವನದಲ್ಲಿ ಬಲಪ್ರದರ್ಶನ
ಹಿರಿಯ ನಾಯಕ ಎಂಪಿ ಪ್ರಕಾಶ್ ಮುಂದಿನ ಹಾದಿ ಏನು ?