ರಾಜಕೀಯ ನಾಯಕರ ದೃಷ್ಟಿ ಇದೀಗ ರಾಜ್ಯಪಾಲರತ್ತ ನೆಟ್ಟಿದೆ. ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಕೈಗೊಳ್ಳುವ ಮುಂದಿನ ಕ್ರಮ ಕುತೂಹಲಕಾರಿಯಾಗಿದ್ದು, ರಾಜ್ಯಪಾಲರು ಇನ್ನು 24 ತಾಸುಗಳ ಒಳಗಾಗಿ ಸರ್ಕಾರ ರಚನೆಗೆ ಆಹ್ವಾನಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.
ರಾಷ್ಟ್ರಪತಿಗಳ ಮುಂಭಾಗದಲ್ಲಿ ಶಾಸಕರ ಪರೇಡ್ ನಡೆಸಲು ಸಿದ್ಧ ಎಂದು ಬಿಜೆಪಿ ಘೋಷಿಸಿದೆ. ಈ ನಡುವೆ, ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ಭಿನ್ನಮತೀಯ ನಾಯಕ ಎಂ.ಪಿ.ಪ್ರಕಾಶ್ ಬಣದಲ್ಲಿದ್ದ 12 ಶಾಸಕರಲ್ಲಿ ಎಂಟು ಶಾಸಕರನ್ನು ಸೆಳೆಯಲು ಕುಮಾರಸ್ವಾಮಿ ಬಣ ಕೊನೆಗೂ ಯಶಸ್ವಿಯಾಗಿದೆ.
ಇದರಿಂದಾಗಿ ಬಿಜೆಪಿ-ಜೆಡಿಎಸ್ ಒಕ್ಕೂಟದ ಶಾಸಕರ ಸಂಖ್ಯಾಬಲ 129 ತಲುಪಿತು. ಸರಳ ಬಹುಮತದ 113ರ ಗಡಿ ದಾಟಿರುವುದನ್ನು ರಾಜಭವನದಲ್ಲಿ ಬಿಜೆಪಿ-ಜೆಡಿಎಸ್ ಶಾಸಕರು ಪರೇಡ್ ನಡೆಸಿ ರಾಜ್ಯಪಾಲರಿಗೆ ತೋರಿಸಿಕೊಟ್ಟರು.
ರಾಜ್ಯಪಾಲರು ಕೋರದೇ ಇದ್ದರೂ, ಸರ್ಕಾರ ರಚನೆಗೆ ವಿನೂತನ ರೀತಿಯಲ್ಲಿ ಒತ್ತಡ ಹೇರುವುದಾಗಿ ಎರಡೂ ಪಕ್ಷದ ಮುಖಂಡರು ಹೇಳಿದ್ದಾರೆ.
|