ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ವಿಧಾನಸಭೆ ವಿಸರ್ಜನೆಗೆ ಕಾಂಗ್ರೆಸ್ ಮನವಿ
ಮಗದೊಮ್ಮೆ ಸರಕಾರ ರಚನೆಗೆ ಪ್ರಯತ್ನ ನಡೆಸಿರುವ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬೇಡಿ ಎಂದು ರಾಜ್ಯಪಾಲರಿಗೆ ಕಾಂಗ್ರೆಸ್ ಮುಖಂಡರು ಮನವಿ ಮಾಡಿದ್ದಾರೆ.

ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಪತನಗೊಂಡನಂತರ ವಿಧಾನಸಭೆ ವಿಸರ್ಜಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯಪಾಲರಿಗೆ ಬರೆದ ಪತ್ರವನ್ನು ಆಧಾರವಾಗಿಟ್ಟುಕೊಂಡು ವಿಧಾನಸಭೆ ವಿಸರ್ಜಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮಾಜಿ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿರುವ ಬಿ.ಎಸ್.ಯಡ್ಯೂರಪ್ಪ ಅವರು ನಿಯಮಗಳನ್ನು ಗಾಳಿಗೆ ತೂರಿ ನೂರಾರು ಕೋಟಿ ರೂ. ಗಳ ಕಾರ್ಯಕ್ರಮಗಳನ್ನು ಘೋಷಿಸಿದ್ದನ್ನು ಜೆಡಿಎಸ್ ಜಾಹೀರಾತಿನ ಮೂಲಕ ಪ್ರಕಟಿಸಿದ್ದು, ಹಾಗೂ ಪರಸ್ಪರ ದೋಷಾರೋಪ ಮಾಡಿಕೊಂಡ ಉಭಯಪಕ್ಷಗಳ ಮುಖಂಡರ ಹೇಳಿಕೆಗಳು ಇರುವ ಪತ್ರಿಕೆಗಳ ತುಣುಕುಗಳನ್ನು ತಮ್ಮ ಮನವಿ ಪತ್ರಕ್ಕೆ ಕಾಂಗ್ರೆಸ್ ಜೋಡಿಸಿದೆ.

ರಾಜ್ಯಪಾಲರ ಭೇಟಿಗೂ ಮುನ್ನ ಕಾಂಗ್ರೆಸ್ ಮುಖಂಡರು ಸಭೆ ಸೇರಿ ಎಲ್ಲ ವಿಷಯಗಳನ್ನು ಚರ್ಚೆ ಮಾಡಿ ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮತ್ತಷ್ಟು
ಸರಕಾರ ರಚನೆ ವಿಳಂಬವಾದಲ್ಲಿ ಹೋರಾಟ: ಬಿಜೆಪಿ
ಲಿಖಿತ ಒಪ್ಪಂದಕ್ಕೆ ಬಿಜೆಪಿ-ಜೆಡಿಎಸ್
ಪಕ್ಷ ಒಡೆಯದಿರಲು ಬಿಜೆಪಿಯೊಂದಿಗೆ ಮೈತ್ರಿ: ದೇವೇಗೌಡ
ರಾಜ್ಯಪಾಲರ ಅಂಕಿತಕ್ಕೆ ಜೆಡಿಎಸ್-ಬಿಜೆಪಿ ನಿರೀಕ್ಷೆ
ರಂಗಭೂಮಿಯ ಪ್ರೇಮಾ ಕಾರಂತ ನಿಧನ
ರಾಜ್ಯೋತ್ಸವ ಪ್ರಶಸ್ತಿ ಪ್ರಕಟ