ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಕೊಪ್ಪ ಸುತ್ತಮುತ್ತ ನಕ್ಸಲ್ ಕರಪತ್ರ
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಸ್ಥಗಿತವಾಗಿದೆ ಎಂದುಕೊಂಡಿರುವಾಗಲೇ ಕೊಪ್ಪ ತಾಲೂಕಿನ ವಿವಿಧೆಡೆ ನಕ್ಸಲ್ ಸಂಘಟನೆಗೆ ಸಂಬಂಧಿಸಿದ ಕರಪತ್ರಗಳು ದೊರೆತಿವೆ.

ಬಸರೀಕಟ್ಟೆ ಸೇರಿದಂತೆ ವಿವಧೆಡೆ ದೊರೆ ಕರಪತ್ರಗಳಲ್ಲಿ ಬಜರಂಗದಳ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಮತ್ತು ಶಾಸಕ ಸಿ.ಟಿ.ರವಿ ಅವರನ್ನು ಟೀಕಿಸಲಾಗಿದೆ.

ಫ್ಯಾಸಿಸ್ಟ್ ಹಿಂದೂವಾದಿಗಳಿಗೆ ತೀವ್ರ ಎಚ್ಚರಿಕೆ ನೀಡಲಾಗಿದೆ. ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಕರಪತ್ರ ಅಂಚೆ ಮೂಲಕವೂ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಈ ನಡುವೆ ಮೇಗೂರು ಭಾಗದಲ್ಲಿ ನಾಲ್ಕನೇ ತರಗತಿ ಓದಿದ ಯುವಕನೋರ್ವ ನಾಪತ್ತೆಯಾಗಿದ್ದಾನೆಂದು ದೂರು ದಾಖಲಾಗಿದ್ದು, ಈತ ನಕ್ಸಲ್ ಪಡೆಗೆ ಹೊಸ ಸೇರ್ಪಡೆ ಎಂಬ ಊಹೆ ಇದೆ.
ಮತ್ತಷ್ಟು
ವಿಧಾನಸಭೆ ವಿಸರ್ಜನೆಗೆ ಕಾಂಗ್ರೆಸ್ ಮನವಿ
ಮೈತ್ರಿಗೆ ಹೆಚ್ಚಿದ ಬಲ: ಬಂಡಾಯ ಬಣಕ್ಕೆ ಆಘಾತ
ಲಿಖಿತ ಒಪ್ಪಂದಕ್ಕೆ ಬಿಜೆಪಿ-ಜೆಡಿಎಸ್
ಪಕ್ಷ ಒಡೆಯದಿರಲು ಬಿಜೆಪಿಯೊಂದಿಗೆ ಮೈತ್ರಿ: ದೇವೇಗೌಡ
ರಾಜ್ಯಪಾಲರ ಅಂಕಿತಕ್ಕೆ ಜೆಡಿಎಸ್-ಬಿಜೆಪಿ ನಿರೀಕ್ಷೆ
ರಂಗಭೂಮಿಯ ಪ್ರೇಮಾ ಕಾರಂತ ನಿಧನ