ಜೆಡಿಎಸ್ ಬೆಂಬಲದೊಂದಿಗೆ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ಇದೀಗ ವಿಧಾನ ಸಭೆಯ ವಿಸರ್ಜನೆಯ ಭೀತಿ ಎದುರಾಗಿದೆ.
ಇನ್ನು 24 ಗಂಟೆಗಳಲ್ಲಿ ರಾಜ್ಯಪಾಲರು ತಮ್ಮನ್ನು ಸರ್ಕಾರ ರಚನೆಗೆ ಆಹ್ವಾನಿಸಬೇಕು ಎಂದು ಉಭಯ ಪಕ್ಷಗಳ ನಾಯಕರು ಒತ್ತಾಯ ಮಾಡಿದ್ದರು.
ತಮ್ಮನ್ನು ಕರೆಯದೆ ಸಲಹೆಗಾರರಿಗೆ ಖಾತೆಗಳನ್ನು ಹಂಚಿಕೆ ಮಾಡಿರುವುದು ಬಿಜೆಪಿ ಆತಂಕಕ್ಕೆ ಕಾರಣವಾಗಿದೆ.
ಹೀಗಾಗಿ ಒತ್ತಡ ತಂತ್ರವನ್ನು ತೀವ್ರ ಗೊಳಿಸಲು ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಬುಧವಾರ ರಾಜಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿವೆ.
ರಾಜ್ಯಪಾಲರೇನೋ ಒಳ್ಳಯವರೇ. ಜಯಪ್ರಕಾಶ್ ನಾರಾಯಣ್ ಗರಡಿಯಲ್ಲಿ ಪಳಗಿದ ರಾಮೇಶ್ವರ ಠಾಕೂರ್ ಅವರಿಗೆ ಏನು ಮಾಡಬೇಕೆಂದು ತಿಳಿದಿದೆ. ಆದರೆ ಸುತ್ತ ಮುತ್ತ ಇರುವ ಕಾಂಗ್ರೆಸ್ ಮುಖಂಡರು ಅವರ ತಲೆ ಕೆಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಗಾದಿ ಏರಲು ತುದಿಗಾಲಲ್ಲಿ ನಿಂತಿರುವ ಯಡ್ಯೂರಪ್ಪ ಹೇಳಿದ್ದಾರೆ.
ಆದರೆ ಇದಾವುದನ್ನು ರಾಜ್ಯಪಾಲರು ಗಮನಕ್ಕೆ ತಂದು ಕೊಂಡಿಲ್ಲ. ಸಾಂವಿಧಾನಿಕವಾಗಿ ಏನು ಮಾಡಬೇಕೋ ಅದರಂತೆ ಅವರು ನಡೆದುಕೊಳ್ಳುತ್ತಿದ್ದಾರೆ.
|