ರಾಜ್ಯದಲ್ಲಿ ರಾಷ್ಟ್ತ್ರಪತಿ ಆಡಳಿತ ಮತ್ತಷ್ಟು ಭದ್ರಗೊಳ್ಳಲಿದೆಯೇ? ಜನಪ್ರತಿನಿಧಿಗಳ ಸರ್ಕಾರ ರಚನೆ ಆಗುವ ಸಾಧ್ಯತೆ ಇಲ್ಲವೇ? ಇಂಥ ಪ್ರಶ್ನೆಗಳು ಜನರಲ್ಲಿ ಮೂಡುತ್ತಿವೆ. ಅದಕ್ಕೆ ಕಾರಣವೆಂದರೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ತಮ್ಮದೇ ಆದ ಮಿನಿ ಸಂಪುಟ ರಚಿಸಿ ಆದೇಶವನ್ನು ಹೊರಡಿಸಿರುವುದು.
ತಮ್ಮ ಮೂವರ ಸಲಹೆಗಾರರಿಗೆ ವಿವಿಧ ಖಾತೆಗಳನ್ನು ಹಂಚುವ ಮೂಲಕ ರಾಷ್ಟ್ತ್ರಪತಿ ಆಡಳಿತ ಮುಂದುವರೆಯುವ ಬಗ್ಗೆ ಸೂಚನೆ ನೀಡಿದ್ದಾರೆ.
ಇದರಿಂದಾಗಿ ಬಜೆಪಿ-ಜೆಡಿಎಸ್ ಪಕ್ಷಗಳಲ್ಲಿ ತಳಮಳ ಮೂಡಿಸಿದ್ದಾರೆ. ರಾಜ್ಯಪಾಲರು ಸಲಹೆಗಾರರಾದ ಪಿ.ಪಿ.ಪ್ರಭು ಅವರಿಗೆ 11 ಖಾತೆಗಳು, ಎಸ್. ಕೃಷ್ಣ ಕುಮಾರ್ ಅವರಿಗೆ 12 ಖಾತೆಗಳು ಮತ್ತು ಪಿ.ಕೆ.ತಾರಕನ್ ಅವರಿಗೆ 10 ಖಾತೆಗಳ ಜವಾಬ್ದಾರಿಯನ್ನು ವಹಿಸಿದ್ದಾರೆ.
ಪಿ.ಪಿ. ಪ್ರಭು ಅವರಿಗೆ ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಆಹಾರ ಮತ್ತು ನಾಗರಿಕ ಪೂರೈಕೆ, ಅರಣ್ಯ, ಪರಿಸರ, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಡಳಿತ ಸಿಬ್ಬಂದಿ ಮತ್ತು ಸುಧಾರನೆ, ಗ್ರಾಮ್ಬಿಣಾಭಿವೃದ್ದಿ ಪಂಚಾಯತ್ ರಾಜ್, ಸಹಕಾರ, ಸಂಪುಟ ವ್ಯವಹಾರಗಳು.
ಎಸ್. ಕೃಷ್ಣಕುಮಾರ್ ಅವರಿಗೆ ಹಣಕಾಸು, ವಾಣಿಜ್ಯ ಮತ್ತು ಕೈಗಾರಿಕೆ, ನಗರಾಭಿವೃದ್ದಿ, ಇಚಿಧನ, ಲೋಕೋಪಯೋಗಿ ಇಲಾಖೆ, ಮೂಲಭೂತ ಸೌಲಭ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಐಟಿ-ಬಿಟಿ, ಕನ್ನಡ ಮತ್ತು ಸಂಸ್ಕ್ಕತಿ, ಜಲ ಸಂಪನ್ಮೂಲ, ಯೋಜನಾ, ಖಾತೆ, ಸಾರ್ವಜನಿಕ ಉದ್ದಿಮೆಗಳು, ವಸತಿ ಖಾತೆಗಳನ್ನು ಹಂಚಲಾಗಿದೆ. ಪಿ.ಕೆ.ತಾರಕನ್ ಅವರಿಗೆ ಗೃಹ, ಸಾರಿಗೆ, ಕಂದಾಯ, ಕಾನೂನು, ಸಂಸದೀಯ ವ್ಯವಹಾರಗಳು, ಸಮಾಜ ಕಲ್ಯಾಣ, ಯುವಜನಸೇವೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾರ್ಮಿಕ, ವಾರ್ತೆ, ಪ್ರವಾಸೋದ್ಯಮ ಖಾತೆಗಳನ್ನು ನೀಡಲಾಗಿದೆ.
|