ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಸುವರ್ಣಯುಗ ಪಕ್ಷ 14ರಂದು ಘೋಷಣೆ
ತಮ್ಮದೇ ಆದ ಸುವರ್ಣಯುಗ ಪಕ್ಷವನ್ನು ಆರಂಭಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಪುತ್ರ ಮಹಿಮಾ ಪಟೇಲ್ ಪ್ರಯತ್ನ ಆರಂಭಿಸಿದ್ದಾರೆ.

ಚನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ಮಹಿಮಾಪಟೇಲ್ ಅವರು ತಮ್ಮ ಅಭಿಮಾನಿಗಳು, ಮಿತ್ರರು ಹಾಗೂ ಜೆಡಿಎಸ್ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿದ್ದಾರೆ.

ಜೆಡಿಎಸ್ ಕಾರ್ಯಕರ್ತರಲ್ಲಿ ಕೆಲವರು ಜೆಡಿಎಸ್‌ನ್ನು ತೊರೆಯದಂತೆ ಮಹಿಮಾ ಅವರ ಮೇಲೆ ಒತ್ತಡ ಹೇರಿದರು. ಅದರೆ ಅದಕ್ಕೆ ಮಹಿಮಾ ಒಪ್ಪಲಿಲ್ಲ.

ಮಾತಿಗೆ ತಪ್ಪಿದ ಕುಮಾರಸ್ವಾಮಿ ಅವರು ಮತ್ತೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಮುಂದಾಗಿದ್ದಾರೆ.

ಅದೇ ವಿಷಯಕ್ಕೆ ಮುನಿಸಿಕೊಂಡು ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸದೆ ಬಂದಿರುವ ಮಹಿಮಾ ಪಟೇಲ್ ತಮ್ಮ ಮನಸು ಬದಲಾಯಿಸಿಕೊಳ್ಳಬೇಕು, ಮುಂದಿನ 18 ತಿಂಗಳ ವರೆಗೆ ಜೆಡಿಎಸ್‌ನಲ್ಲೇ ಮುಂದುವರೆಯಬೇಕು ಎಂದು ಪರಿಪರಿಯಾಗಿ ಬೇಡಿಕೊಂಡರು.

ಕೆಲವರಂತೂ ಸಭೆಯಿಂದ ಹೊರನಡೆದರು. ತಮ್ಮ ಹೊಸ ಪಕ್ಷ ಸುವರ್ಣಯುಗವನ್ನು ನವೆಂಬರ್ 14ರಂದು ಘೋಷಿಸುವುದಾಗಿ ಮಹಿಮಾ ಪಟೇಲ್ ಪ್ರಕಟಿಸಿದರು.

ರಾಜ್ಯದಲ್ಲಿ ಜೆಡಿಎಸ್ ಅವಸಾನ ಹಂತದಲ್ಲಿದ್ದು, ಈಗಲೋ ಆಗಲೋ ಸಾಯಲು ದಿನ ಎಣಿಸುತ್ತಿದೆ ಎಂದು ಅವರು ಲೇವಡಿ ಮಾಡಿದರು.

ದೇವೇಗೌಡರು, ಕುಮಾರಸ್ವಾಮಿ ಹಾಗೂ ಎಂ.ಪಿ.ಪ್ರಕಾಶ್ ಅವರ ದಾರಿಗಳು ಬೇರೇ ಬೇರೆ ಯಾಗಿವೆ. ಪಕ್ಷ ಕಲುಷಿತವಾಗಿದೆ. ಅಂಥ ಪಕ್ಷದಲ್ಲಿ ಇರುವುದಕ್ಕಿಂತ ನ್ಯಾಯ, ನೀತಿ, ಪ್ರಾಮಾಣಿಕತೆ ಮತ್ತು ಸ್ವಾರ್ಥ ರಹಿತ ರಾಜಕಾರಣಕ್ಕಾಗಿ ಸುವರ್ಣ ಯುಗ ಪಕ್ಷ ಸ್ಥಾಪಿಸುವುದಾಗಿ ಅವರು ತಿಳಿಸಿದರು.
ಮತ್ತಷ್ಟು
ರೆಸಾರ್ಟ್‌ಗಳಲ್ಲಿ ಮುಂದುವರೆಯುತ್ತಿರುವ ಶಾಸಕರ ವಾಸ್ತವ್ಯ
ಆರೋಪಗಳು ನಿರಾಧಾರ: ಎಸ್.ಎಂ.ಕೃಷ್ಣ
ರಾಷ್ಟ್ತ್ರಪತಿ ಆಡಳಿತ ಮುಂದುವರಿಕೆ ?
ಜೆಡಿಎಸ್, ಬಿಜೆಪಿಯಿಂದ ರಾಜಭವನ ಮುತ್ತಿಗೆ
ಕೊಪ್ಪ ಸುತ್ತಮುತ್ತ ನಕ್ಸಲ್ ಕರಪತ್ರ
ವಿಧಾನಸಭೆ ವಿಸರ್ಜನೆಗೆ ಕಾಂಗ್ರೆಸ್ ಮನವಿ