ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಮಾನವೀಯತೆ ಮರೆತ ಸಮಾಜ
ಸಮಾಜಕ್ಕೆ ಶಾಪವಾಗಿರುವ ಏಡ್ಸ್ ಹೆಮ್ಮಾರಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಹಾಗೂ ಏಡ್ಸ್ ಪೀಡಿತರಿಗೆ ಬಗ್ಗೆ ಇಲ್ಲಸಲ್ಲದ ಆಪೋಹಗಳನ್ನು ದೂರಮಾಡುವಂತೆ ಪ್ರಚಾರ ಮಾಡಲು ಸರ್ಕಾರ ಕೋಟ್ಯಾಂತರ ರೂ.ಗಳನ್ನು ವೆಚ್ಚಮಾಡುತ್ತಿದೆ. ಆದರೆ ಅವೆಲ್ಲವೂ ವ್ಯರ್ಥ ಎಂದು ಬಿಜಾಪುರದಲ್ಲಿ ನಡೆದ ಸಂಘಟನೆ ಸಾಬೀತು ಪಡಿಸುತ್ತಿದೆ.

ಕಳೆದ 15 ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿದ್ದ ಬಿಜಾಪುರ ತಾಲೂಕಿನ ತೊನಶ್ಯಾಳ ಗ್ರಾಮದ ಏಡ್ಸ್ ಪೀಡಿತ ಶಾಂತವ್ವ ಎಂಬ ಮಹಿಳೆ ಆಸ್ಪತ್ರೆಯಲ್ಲೇ ಮೃತಪಟ್ಟಳು. ಅದಾಗಿ ನಾಲ್ಕು ದಿವಸ ಕಳೆಯಿತು.

ಆದರು ಅವಳ ಅಂತ್ಯ ಸಂಸ್ಕಾರವಿಲ್ಲದೇ ಬಿಜಾಪುರ ಸರ್ಕಾರಿ ದವಾಖಾನೆಯಲ್ಲಿ ಆ ಶವ ಅನಾಥೆಯಾಗಿ ಬಿದ್ದಿದೆ. ಮೃತ ಶಾಂತವ್ವ ನಿಜಕ್ಕೂ ಅನಾಥೆಯಲ್ಲ. ಆಕೆಗೆ ಗಂಡನ ಮನೆಯವರಿದ್ದಾರೆ.

ತವರುಮನೆಯವರೂ ಇದ್ದಾರೆ. ಬಂಧು ಬಳಗವಿದೆ. ಆದರೆ ಏಡ್ಸ್ ಪೀಡಿತಳು ಎಂಬ ಒಂದೇ ಕಾರಣಕ್ಕೆ ಆಕೆಯ ಸಂಬಂಧಿಕರಾರು ಮೃತ ದೇಹದ ಬಳಿ ಸುಳಿಯುತ್ತಿಲ್ಲ.

ಇದು ಮಾನವೀಯತೆಗೆ ದೊಡ್ಡ ಅವಮಾನ. ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಅಂತ್ಯ ಸಂಸ್ಕಾರಕ್ಕಾಗಿ ಶವವನ್ನು ಪಡೆಯುವಂತೆ ಈಗಾಗಲೇ ನಗರಸಭೆಗೆ ಮಾಹಿತಿ ನೀಡಿದ್ದಾರೆ. ಆದರೆ ನಗರಸಭೆಯೂ ಈ ಬಗ್ಗೆ ಗಮನ ಹರಿಸಿಲ್ಲ.

ಇದು ನಾಗರಿಕ ಸಮಾಜಕ್ಕೆ ತಲೆ ತಗ್ಗಿಸುವಂತೆ ಮಾಡಿದೆ. ಬಿಜಾಪುರ ಜಿಲ್ಲೆಯಲ್ಲಿ ಸಾಕಷ್ಟು ಸರಕಾರಯೇತ ಸಂಘ-ಸಂಸ್ಥೆಗಳು ಹಗಲಿರುಳು ಶ್ರಮಿಸುತ್ತಿವೆ.

ಆದರೆ ಏಡ್ಸ್ ಪೀಡಿತ ಶಾಂತವ್ವಳ ಮೃತದೇಹ ಪಡೆದು ಅಂತ್ಯಕ್ರಿಯೆ ಮುಗಿಸಲು ಮುಂದೆ ಯಾರೂ ಬರುತ್ತಿಲ್ಲ.
ಮತ್ತಷ್ಟು
ಸುವರ್ಣಯುಗ ಪಕ್ಷ 14ರಂದು ಘೋಷಣೆ
ರೆಸಾರ್ಟ್‌ಗಳಲ್ಲಿ ಮುಂದುವರೆಯುತ್ತಿರುವ ಶಾಸಕರ ವಾಸ್ತವ್ಯ
ಆರೋಪಗಳು ನಿರಾಧಾರ: ಎಸ್.ಎಂ.ಕೃಷ್ಣ
ರಾಷ್ಟ್ತ್ರಪತಿ ಆಡಳಿತ ಮುಂದುವರಿಕೆ ?
ಜೆಡಿಎಸ್, ಬಿಜೆಪಿಯಿಂದ ರಾಜಭವನ ಮುತ್ತಿಗೆ
ಕೊಪ್ಪ ಸುತ್ತಮುತ್ತ ನಕ್ಸಲ್ ಕರಪತ್ರ