ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ರಾಜ್ಯಪಾಲರ ವಿಳಂಬ ನೀತಿ: ಪ್ರಧಾನಿಗೆ ದೂರು
ಸರಕಾರ ರಚನೆಗೆ ರಾಜ್ಯಪಾಲರು ವಿಳಂಬ ಮಾಡುತ್ತಿದ್ದು, ಇದಕ್ಕೆ ಕಾಂಗ್ರೆಸ್ ಕುಮ್ಮಕ್ಕು ಕಾರಣ ಎಂದು ಶಂಕಿಸಿರುವ ಬಿಜೆಪಿ-ಜೆಡಿಎಸ್, ಇದೀಗ ಪ್ರಧಾನಿ ಬಳಿಗೆ ದೂರು ನೀಡಲು ತೀರ್ಮಾನಿಸಿವೆ.

ರಾಜ್ಯಪಾಲರು 24 ಗಂಟೆಗಳೊಳಗೆ ಸರಕಾರ ರಚನೆಗೆ ಆಹ್ವಾನಿಸದಿದ್ದರೆ "ರಾಜಭವನ ಚಲೋ" ಕೈಗೊಳ್ಳುವುದಾಗಿ ಉಭಯ ಪಕ್ಷಗಳು ಮಂಗಳವಾರ ಎಚ್ಚರಿಸಿದ್ದವು.

ಇದೀಗ ಎರಡೂ ಪಕ್ಷಗಳ ಸಂಸದರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಲಿದ್ದರೆ, ಶಾಸಕರು ಮತ್ತು ಇತರ ಮುಖಂಡರು ರಾಜ್ಯದೆಲ್ಲೆಡೆ ಬೀದಿಗಿಳಿದು ರಾಜ್ಯಪಾಲರ ವಿಳಂಬ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.

ಈ ನಡುವೆ, ವಿಧಾನಸಭೆ ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಮುಂದುವರಿಸುವಂತೆ ಕಾಂಗ್ರೆಸ್ ಪಕ್ಷವು ರಾಜ್ಯಪಾಲರನ್ನು ವಿನಂತಿಸಿದ್ದು, ಕೇಂದ್ರೀಯ ನಾಯಕರ ಮೇಲೂ ಒತ್ತಡ ಹೇರತೊಡಗಿದೆ. ಮಗದೊಮ್ಮೆ ಸರಕಾರ ರಚನೆಗೆ ಪ್ರಯತ್ನ ನಡೆಸಿರುವ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬೇಡಿ ಎಂದು ರಾಜ್ಯಪಾಲರಿಗೆ ಕಾಂಗ್ರೆಸ್ ಮುಖಂಡರು ಮನವಿ ಮಾಡಿದ್ದಾರೆ.

ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಪತನಗೊಂಡನಂತರ ವಿಧಾನಸಭೆ ವಿಸರ್ಜಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯಪಾಲರಿಗೆ ಬರೆದ ಪತ್ರವನ್ನು ಆಧಾರವಾಗಿಟ್ಟುಕೊಂಡು ವಿಧಾನಸಭೆ ವಿಸರ್ಜಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮತ್ತಷ್ಟು
ಮಾನವೀಯತೆ ಮರೆತ ಸಮಾಜ
ಸುವರ್ಣಯುಗ ಪಕ್ಷ 14ರಂದು ಘೋಷಣೆ
ರೆಸಾರ್ಟ್‌ಗಳಲ್ಲಿ ಮುಂದುವರೆಯುತ್ತಿರುವ ಶಾಸಕರ ವಾಸ್ತವ್ಯ
ಆರೋಪಗಳು ನಿರಾಧಾರ: ಎಸ್.ಎಂ.ಕೃಷ್ಣ
ರಾಷ್ಟ್ತ್ರಪತಿ ಆಡಳಿತ ಮುಂದುವರಿಕೆ ?
ಜೆಡಿಎಸ್, ಬಿಜೆಪಿಯಿಂದ ರಾಜಭವನ ಮುತ್ತಿಗೆ