ಬುಧವಾರ ಸಂಜೆಯೊಳಗೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಕೂಟಕ್ಕೆ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸದಿದ್ದರೆ ಬಿಜೆಪಿ-ಜೆಡಿಎಸ್ ಕೂಟದ 129 ಶಾಸಕರನ್ನು ರಾಷ್ಟ್ರಪತಿ ಪ್ರತಿಭಾಪಾಟೀಲ್ ಎದುರು ಪೆರೇಡ್ ಮಾಡುವುದಾಗಿ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಬೆದರಿಕೆ ಹಾಕಿದ್ದಾರೆ.
ಕಾಂಗ್ರೆಸ್‌ಗೆ ಕುದುರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲು ವಿಧಾನಸಭೆಯನ್ನು ಅಮಾನತಿನಲ್ಲಿರಸಲಾಯಿತು ಎಂದು ಅವರು ಆರೋಪಿಸಿದರು. ಬಿಜೆಪಿಯು ಜೆಡಿಎಸ್ ಜತೆ ಪುನಃ ಸೇರುವುದನ್ನು ಸಮರ್ಥಿಸಿಕೊಂಡ ಅವರು ರಾಜಕಾರಣದಲ್ಲಿ ಯಾರೂ ಕಾಯಂ ಶತ್ರುಗಳಲ್ಲ ಅಥವಾ ಮಿತ್ರರಲ್ಲ. ರಾಜೀವ್ ಗಾಂಧಿ ಹತ್ಯೆಯಲ್ಲಿ ಡಿಎಂಕೆ ಪಾತ್ರವಹಿಸಿತೆಂದು ಕಾಂಗ್ರೆಸ್ ಆರೋಪಿಸಿದ್ದರೂ ಅದರ ಜತೆ ಕೈಗೂಡಿಸಲಿಲ್ಲವೇ ಎಂದು ಅವರು ಪ್ರಶ್ನಿಸಿದರು
ವಿಳಂಬ ಮಾಡದೇ ಯಡ್ಯೂರಪ್ಪ ಅವರಿಗೆ ಸರ್ಕಾರ ರಚನೆಗೆ ಆಹ್ವಾನಿಸಬೇಕೆಂದು ರಾಜ್ಯಪಾಲರನ್ನು ವಿನಂತಿ ಮಾಡಿಕೊಳ್ಳಲು ತಾವಿಲ್ಲಿಗೆ ಆಗಮಿಸಿದ್ದಾಗಿ ಅವರು ಹೇಳಿದರು. ಈಗ ರಾಜ್ಯಪಾಲರ ಮುಂದಿರುವ ಸವಾಲು ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಅಥವಾ ಅದನ್ನು ಹತ್ಯೆಮಾಡುವುದು ಎಂದು ಸುಷ್ಮಾ ಹೇಳಿದರು.
|