ದೂರವಾಗಿದ್ದ ಪಕ್ಷಗಳೆರಡೂ ಸೇರಿ ಮತ್ತೆ ಹೊಸ ಮೈತ್ರಿ ಸರ್ಕಾರ ರಚನೆಗೆ ಮುಂದಾದಾಗ ಎದುರಾದ ತೊಂದರೆಗಳನ್ನು ನಿವಾರಿಸಲು ಬಿಜೆಪಿ ತನ್ನ ಪ್ರಯತ್ನವನ್ನು ಮುಂದುವರೆಸಿದೆ.
ಕರ್ನಾಟಕಕ್ಕೆ ಸೀಮಿತವಾಗಿರುವ ಹೊಸ ಮೈತ್ರಿ ಸರ್ಕಾರ ರಚನೆ ಕುರಿತ ಚಟುವಟಿಕೆಗಳು ಬುಧವಾರ ದೆಹಲಿಗೆ ಸ್ಥಳಾಂತರಗೊಂಡಿವೆ.
ಬುಧವಾರ ಬಿಜೆಪಿ ರಾಷ್ಟ್ತ್ರೀಯ ಮುಖಂಡರಾದ ಅಡ್ವಾಣಿ, ರಾಜನಾಥ್ ಸಿಂಗ್ ಹಾಗೂ ರಾಜ್ಯದ ಮುಖಂಡರಾದ ಬಿ.ಎಸ್.ಯಡ್ಯೂರಪ್ಪ, ಸದಾನಂದಗೌಡ, ಅನಂತಕುಮಾರ್ ಮುಂತಾದವರು ದೆಹಲಿಗೆ ತೆರಳಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ತಮಗೆ ಸರ್ಕಾರ ರಚನೆಗೆ ಶೀಘ್ರ ಅನುವು ಮಾಡಿಕೊಡುವಂತೆ ಕೋರಿ ಮನವಿ ಸಲ್ಲಿಸಿದ್ದಾರೆ.
ತಮಗೆ ಬಹುಮತವಿದೆ, ಸರ್ಕಾರಕ್ಕೆ ಬೆಂಬಲ ಸೂಚಿಸುವ ಶಾಸಕರನ್ನು ರಾಜ್ಯಪಾಲರೆದುರು ಪರೇಡ್ ಮಾಡಿಸಲಾಗಿದೆ. ಇನ್ನೂ ತಮ್ಮನ್ನು ಸರ್ಕಾರ ರಚನೆಗೆ ತಮ್ಮ ಆಹ್ವಾನಿಸಿಲ್ಲ ಎಂದು ಪ್ರಧಾನಿಗೆ ಮುಖಂಡರು ವಿವರಿಸಿದರು.
ಎಲ್ಲವೂ ಸಂವಿಧಾನಬದ್ಧವಾಗಿ ನಡೆಯುತ್ತದೆ. ಆದರೆ ಸರ್ಕಾರ ರಚನೆಗೆ ಕಾಲಮಿತಿ ವಿಧಿಸುವುದು ಸರಿಯಲ್ಲ ಎಂದು ಪ್ರಧಾನಿಗಳು ಉತ್ತರ ನೀಡಿದ್ದಾರೆ ಎನ್ನಲಾಗಿದೆ. ರಾಷ್ಟ್ತ್ರಪತಿ ಪ್ರತಿಭಾ ಪಾಟೀಲ್ ಅವರನ್ನೂ ಸಹಾ ಭೇಟಿ ಮಾಡಲು ಬಿಜೆಪಿ ಮುಖಂಡರು ಭೇಟಿ ಮಾಡಲು ಪ್ರಯತ್ನಿಸಿದರಾದರೂ ಅವರು ಪ್ರವಾಸದಲ್ಲಿರುವುದರಿಂದ ಅದು ಸಾಧ್ಯವಾಗಲಿಲ್ಲ.
ಬಿಜೆಪಿ ಮುಖಂಡರು ಕೇಂದ್ರ ಗೃಹ ಸಚಿವ ಶಿವರಾಜಪಾಟೀಲ್ ಅವರನ್ನೂ ಸಹಾ ಭೇಟಿಮಾಡಿದ್ದಾಗಿ ದಾವಣಗೆರೆ ಶಾಸಕ ಸಿದ್ದೇಶ್ ಹೇಳಿದ್ದಾರೆ. ರಾಜ್ಯಪಾಲರಿಂದ ವರದಿ ಬಂದನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ ಎಂದು ಸಿದ್ದೇಶ್ ತಿಳಿಸಿದರು.
|