ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಇರುವುದರಿಂದ ಸರ್ಕಾರ ನಡೆಸುವ ಕಾರ್ಯಕ್ರಮಗಳಲ್ಲಿ ಕನ್ನಡ ಗೊತ್ತಿಲ್ಲದ ರಾಜ್ಯಪಾಲರು ಪಾಲ್ಗೊಳ್ಳುವುದರಿಂದ ಕನ್ನಡಿಗರಿಗೆ ಕನ್ನಡ ಸಂದೇಶಗಳು ತಲುಪುವುದಿಲ್ಲ. ಎಲ್ಲ ಕಾರ್ಯಕ್ರಮಗಳೂ ನಾಮಕೇವಾಸ್ತೇ ನಡೆಯಲಿರುವುದು ಕನ್ನಡಿಗರ ದುರಂತ.
ಸಾಧಕರ ಸಾಧನೆಯ ಪರಿಚಯವೂ ಇಲ್ಲದವರಿಂದ ಪ್ರಶಸ್ತಿ ಸ್ವೀಕರಿಸಿ ಮರೆತುಬಿಡಬೇಕಾದ ಪರಿಸ್ಥಿತಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರದ್ದು. ರಾಜ್ಯೋತ್ಸವ ಸಮಾರಂಭ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ನಡೆಯುತ್ತಿರುವುದು ಇದು ಮೂರನೆಯ ಬಾರಿ.
1971ರಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಗಳಾಗಿದ್ದಾಗ 19 ಮಾರ್ಚ್ 1971ರಿಂದ 20 ಮಾರ್ಚ್ 1972ರ ವರೆಗೆ ರಾಷ್ಟ್ರಪತಿ ಆಡಳಿತ ಇತ್ತು.
ಆಗಿನ ರಾಜ್ಯಪಾಲರಾಗಿದ್ದ ಧರ್ಮವೀರ ಅವರು ರಾಜ್ಯೋತ್ಸವದ ಸಾರಥ್ಯ ವಹಿಸಿದ್ದರು. ನಂತರ ಎಸ್.ಆರ್.ಬೊಮ್ಮಾಯಿ ಆಡಳಿತಾವಧಿಯಲ್ಲಿ ಪಿ.ವೆಂಕಟಸುಬ್ಬಯ್ಯ ಅವರು ರಾಜ್ಯಪಾಲರಾಗಿದ್ದರು.
ಆಗಲೂ 21 ಏಪ್ರಿಲ್ 1989ರಿಂದ 30 ನವೆಂಬರ್ 1989ರ ವರೆಗೆ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು. ಇದೀಗ ಮೂರನೆಯ ಬಾರಿಗೆ ರಾಜ್ಯಪಾಲರ ನೇತೃತ್ವದಲ್ಲಿ ರಾಜ್ಯೋತ್ಸವ ಆಚರಿಸುವ ಪರಿಸ್ಥಿತಿ ಬಂದಿದ್ದು, ಈ ಬಾರಿ ರಾಮೇಶ್ವರ ಠಾಕೂರ್ ಅವರ ಸಾರಥ್ಯದಲ್ಲಿ ಕನ್ನಡ ರಾಜ್ಯೋತ್ಸವದ ಸುವರ್ಣ ವರ್ಷಾಚರಣೆಗೆ ತೆರೆ ಬೀಳಲಿದೆ!
|