ಕರ್ನಾಟಕದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಬೆಂಬಲ ನೀಡಿರುವ ಜಾತ್ಯತrತ ಜನತಾದಳದ ರಾಷ್ಟ್ರೀಯ ನಾಯಕ ಎಚ್.ಡಿ.ದೇವೇಗೌಡ ಅವರು ಇದೀಗ ಹೊಸ ವರಸೆ ತೆಗೆದಿದ್ದಾರೆ.
ಸುಗಮವಾಗಿ ಸರ್ಕಾರ ನಡೆಯಬೇಕಾದರೆ ತಮ್ಮ 11 ಷರತ್ತುಗಳನ್ನು ಪೂರೈಸಬೇಕೆಂದು ಗೌಡರು ರಾಗ ಎಳೆದಿದ್ದಾರೆ. ಬುಧವಾರ ರಾತ್ರಿ ಜೆಡಿಎಸ್‌ನ 11 ಷರತ್ತುಗಳುಳ್ಳ ಕರಡು ತಿಳಿವಳಿಕೆ ಪತ್ರವನ್ನು ದೇವೇಗೌಡ ಅವರು ನವದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ರವಾನಿಸಿದ್ದಾರೆ.
ಈ ಪಟ್ಟಿಯಲ್ಲಿ, ಬೆಂಗಳೂರು, ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯಿಂದ ನೈಸ್ ಕಂಪನಿಯ ಅಶೋಕ್ ಖೇಣಿಯನ್ನು ದೂರ ಇಡಬೇಕು, ಬಳ್ಳಾರಿಯ ಮಾಜಿ ಸಚಿವ ಶ್ರೀರಾಮುಲು ತಮ್ಮ ಪುತ್ರ ಕುಮಾರಸ್ವಾಮಿ ವಿರುದ್ಧ ಹೂಡಿರುವ ಮೊಕದ್ದಮೆಯನ್ನು ಹಿಂಪಡೆಯಬೇಕು, ಜಾತ್ಯತೀತ ನಿಲುವಿಗೆ ಬಿಜೆಪಿ ಬದ್ಧವಾಗಿರುವ ಜತೆಗೆ ಅಲ್ಪ ಸಂಖ್ಯಾತರು ಮತ್ತು ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳಬೇಕು ಎಂಬ ಷರತ್ತುಗಳು ಇದರಲ್ಲಿವೆ.
20 ತಿಂಗಳ ಹಿಂದೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಒಪ್ಪಂದವೇರ್ಪಟ್ಟಿದ್ದರೂ ದೇವೇಗೌಡರು ಈ ಬಾರಿ ಸರ್ಕಾರ ರಚನೆಗೆ ಮುಂದಾಗುವ ಮೊದಲು ಈ ಒಪ್ಪಂದಕ್ಕೆ ಬಿಜೆಪಿ ವರಿಷ್ಠರು ಅಂಕಿತ ಹಾಕಬೇಕೆಂದು ಪಟ್ಟು ಹಿಡಿದ್ದಾರೆ.
|